ಶಾಸಕ ಜೆ.ಎನ್.ಗಣೇಶ್ ವಿರುದ್ಧ ಸ್ಪೀಕರ್ ಕಾಗೇರಿ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.17- ಸದನದಲ್ಲಿ ಮಾತನಾಡಲು ಪರಸ್ಪರ ಹೊಂದಾಣಿಕೆಯನ್ನು ಶಾಸಕರು ಮಾಡಿಕೊಳ್ಳಲು ಆಗುವುದಿಲ್ಲ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗರಮ್ಮಾದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಪ್ರಶ್ನೆ ಕೇಳಿ ಉತ್ತರ ಪಡೆದ ನಂತರವೂ ಉಪಪ್ರಶ್ನೆ ಕೇಳಿ ಸಂಬಂಧಪಟ್ಟ ಸಚಿವರಿಂದ ಉತ್ತರ ಪಡೆದಿದ್ದರು. ಆದರೂ ತೃಪ್ತಿಯಾಗದೆ ಮತ್ತೆ ಉಪಪ್ರಶ್ನೆ ಕೇಳಲು ಎದ್ದುನಿಂತಿದ್ದರು.

ಆಗ ಸಭಾಧ್ಯಕ್ಷರು ಪ್ರಶ್ನೋತ್ತರ ಅವಧಿಯಲ್ಲಿ ಸಾಕಷ್ಟು ಪ್ರಶ್ನೆ ಕೇಳಲಾಗಿದೆ. ಮತ್ತೊಮ್ಮೆ ಕೇಳಲು ಅವಕಾಶ ಕೊಡುವುದಿಲ್ಲ ಎಂದು ಹೇಳಿ, ಮುಂದಿನ ಪ್ರಶ್ನೆ ಕೇಳಲು ಶಾಸಕ ಎಚ್.ಎನ್.ನಾರಾಯಣಸ್ವಾಮಿ ಅವರನ್ನು ಆಹ್ವಾನಿಸಿದರು.

ಆಗ ಮಾತನಾಡಲು ಮುಂದಾಗಿದ್ದ ಗಣೇಶ್ ಅವರನ್ನು ಉದ್ದೇಶಿಸಿ, ನೀವು ಮಾತನಾಡಿಬಿಡಿ ಆನಂತರ ನಾನು ಪ್ರಶ್ನೆ ಕೇಳುತ್ತೇನೆ ಎಂದು ನಾರಾಯಣ್ ಹೇಳಿದಾಗ, ಆಗ ಸಭಾಧ್ಯಕ್ಷರು ಗರಮ್ಮಾಗಿ ನಿಮ್ಮಲ್ಲೇ ಹೊಂದಾಣಿಕೆ ಮಾಡಿಕೊಳ್ಳಲು ಆಗುವುದಿಲ್ಲ. ನೀವು ಪ್ರಶ್ನೆ ಕೇಳದಿದ್ದರೆ ಮುಂದಕ್ಕೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

Facebook Comments