ಯಾವುದೇ ಖಾತೆ ನೀಡಿದರು ನಿಭಾಯಿಸಲು ಸಿದ್ದ ; ಶಾಸಕ ಕೆ. ಗೋಪಾಲಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಈ ಭಾರಿಯ ಉಪಚುನಾವಣೆ ರಣಕಣ ಕಾಂಗ್ರೆಸ್, ಜೆಡಿಎಸ್ ಹಾಗೂ ಆಡಳಿತ ಪಕ್ಷ ಬಿಜೆಪಿಗೆ ಪ್ರತಿಷ್ಟೆಯ ಕಣವಾಗಿ ಮಾರ್ಪಟ್ಟಿತ್ತು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ. ಗೋಪಾಲಯ್ಯರವರಿಗೂ ಗೆಲುವು ಪ್ರತಿಷ್ಟೆಯ ಕಣವಾಗಿತ್ತು.

ಈ ಹಿಂದೆ ಕೂಡ ಇದೇ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಎರಡು ಭಾರಿ ಸ್ಪಧಿಸಿ ಗೆಲುವು ಸಾಧಿಸಿದ್ದ ಕೆ. ಗೋಪಾಲಯ್ಯರವರಿಗೆ ಈ ಬಾರಿಯ ಗೆಲುವು ಹಿಂದಿನ ಆ ಎರಡು ಗೆಲುವಿಗಿಂತಲು ಪ್ರತಿಷ್ಟೆ ಹಾಗೂ ಅನಿವಾರ್ಯತೆ ಉಪಚುನಾವಣೆಯ ಗೆಲುವುವಾಗಿತ್ತು.

ಕಡೆಗೂ ಗೆದ್ದು ತೋರಿಸಿದ್ದಾರೆ. ಅವರು ಕ್ಷೇತ್ರಕ್ಕೆ ನೀಡಿರುವ ಅಭಿವೃದ್ಧಿಯ ಕಾರ್ಯಗಳು ಹಾಗೂ ನಂಬಿದ್ದ ಮತದಾರರು ಅವರನ್ನು ಕೈಬಿಡದೆ 3ನೇ ಬಾರಿಗೆ ಗೆಲುವಿನ ಮಾಲೆ ತೊಡಿಸಿದ್ದಾರೆ.

ಹೀಗೆ ಸತತವಾಗಿ 3ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಕೆ.ಗೊಪಾಲಯ್ಯರವರು ಬಿಜೆಪಿ ಸಚಿವ ಸಂಪುಟ ಸೇರಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಯಾವುದೇ ಖಾತೆ ನೀಡಿದ್ರು ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ, ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ತಮ್ಮ ಮುಂದಿನ ನಡೆ ಮತ್ತು ಕಾರ್ಯಜನೆಗಳ ಕುರಿತು ನಮ್ಮೊಂದಿನ ಅವರ ಮನದಾಳದ ಮಾತುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

Facebook Comments

Sri Raghav

Admin