ಶಾಸಕ ಮುನಿರತ್ನರ ರಾಜೀನಾಮೆ ಪತ್ರ ಹರಿದು ಹಾಕಿದ ಡಿಕೆಶಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.6- ರಾಜೀನಾಮೆ ನೀಡಲು ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್ ಕಚೇರಿಗೆ ತೆರಳಿದ್ದ ಅತೃಪ್ತ 12 ಶಾಸಕರಲ್ಲಿ ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಸಚಿ ಡಿ.ಕೆ.ಶಿವಕುಮಾರ್ ಕಿತ್ತುಕೊಂಡು ಹರಿಹಾಕಿದ ಪ್ರಸಂಗ ನಡೆದಿದೆ.

ಶಾಸಕರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ರಾಮಲಿಂಗಾರೆಡ್ಡಿ ಜೊತೆ ರಾಜರಾಜೇಶ್ವರಿ ಶಾಸಕರಾದ ಮುನಿರತ್ನ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರ ಕಚೇರಿಗೆ ಆಗಮಿಸಿದ್ದರು.

ಮೊದಲು ಆಗಮಿಸಿದ 8 ಮಂದಿ ಶಾಸಕರು ವಿಧಾನಸಭೆ ಕಾರ್ಯದಶಿ ವಿಶಾಲಕ್ಷಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ನಂತರ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ರಾಮಲಿಂಗಾರೆಡ್ಡಿ ರಾಜೀನಾಮೆ 2ನೇ ಹಂತದಲ್ಲಿ ನೀಡಿದರು.

ಇನ್ನೇನು ಮುನಿರತ್ನ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿಗೆ ಸಲ್ಲಿಸಬೇಕು ಎನ್ನುವಷ್ಟರಲ್ಲಿ ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಸ್ಪೀಕರ್ ಕಚೇರಿಯನ್ನು ಪ್ರವೇಶಿಸಿದರು. ಈ ಹಂತದಲ್ಲಿ ಕೆಲವು ಶಾಸಕರನ್ನು ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸುವ ಪ್ರಯತ್ನ ನಡೆಸಿದರು.

ಆದರೆ ಯಾವುದೇ ಶಾಸಕರು ತಮ್ಮ ತೀರ್ಮಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದಾಗ ಮುನಿರತ್ನ ಕೈಯಲಿದ್ದ ರಾಜೀನಾಮೆ ಪತ್ರವನ್ನು ಕಿತ್ತುಕೊಂಡು ಹರಿದು ತಮ್ಮ ಬಳಿಯೇ ಇಟ್ಟುಕೊಂಡರು. ಈ ಹಂತದಲ್ಲಿ ಅತೃಪ್ತ ಶಾಸಕರು ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಸ್ಪೀಕರ್ ಕಚೇರಿಯಲ್ಲಿ ಮಾತಿನ ಚಕಮಕಿ ನಡೆಯಿತು.

Facebook Comments

Sri Raghav

Admin