ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನ ಪೀಠಿಕೆ ಬೋಧಿಸಬೇಕು : ಶಾಸಕ ಎನ್.ಮಹೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.6- ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಬೆಳಗಿನ ಅವಧಿಯಲ್ಲಿ ಸಂವಿಧಾನ ಪೀಠಿಕೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಬೇಕು ಎಂದು ಕೊಳ್ಳೇಗಾಲದ ಶಾಸಕ ಎನ್.ಮಹೇಶ್ ಸರ್ಕಾರವನ್ನು ಒತ್ತಾಯಿಸಿದರು.  ಭಾರತ ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಳ್ಳೇಗಾಲದ ತಮ್ಮ ಕ್ಷೇತ್ರದಲ್ಲಿ ಈ ರೀತಿ ಸಂವಿಧಾನದ ಪೀಠಿಕೆ ಬೋಧಿಸುವ ಕೆಲಸವಾಗುತ್ತಿದೆ. ಎಲ್ಲ ಕ್ಷೇತ್ರಗಳಲೂ ರಾಜ್ಯಾದ್ಯಂತ ಎಲ್ಲ ಕ್ಷೇತ್ರಗಳಲ್ಲೂ ಇದು ಜಾರಿಗೆ ತರಬೇಕು ಎಂದು ಮನವಿ ಮಾಡಿದರು.

ಸರ್ಕಾರದಿಂದ ನವೆಂಬರ್ 26 ಸಂವಿಧಾನ ದಿನಾಚರಣೆಯನ್ನಾಗಿ ಘೋಷಣೆ ಮಾಡಿ ಆಚರಣೆ ಮಾಡಲಾಗುತ್ತಿದೆ. 2000ದಿಂದಲೂ ಜನವರಿ 26ರಂದು ಸ್ನೇಹಿತರೊಡಗೂಡಿ ಸಂವಿಧಾನ ದಿನಾಚರಣೆ ಮಾಡುತ್ತಿದ್ದೇವೆ ಎಂದರು.  ಮಾತೆ ಸಾವಿತ್ರಿ ಬಾ ಪುಲೇ ಜಯಂತಿ ಆಚರಣೆ ಮಾಡುತ್ತಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಅಂಬೇಡ್ಕರ್ ಅವರು ಸಂವಿಧಾನಬದ್ದವಾಗಿ ಪರಿಶಿಷ್ಟರಿಗೆ ರಾಜಕೀಯ ಮೀಸಲಾತಿಯನ್ನು ತಂದುಕೊಟ್ಟಿದ್ದಾರೆ. ಸ್ವತಂತ್ರವಾಗಿ ಗೆದ್ದುಬರುವ ಸಾಮಥ್ರ್ಯ ಈಗಲೂ ಇಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ ಎಂದರು.  ರಾಜಕೀಯ ಮೀಸಲಾತಿಯಿಂದಾಗಿ ರಾಜ್ಯದಿಂದ ವಿಧಾನಸಭೆಗೆ 51 ಶಾಸಕರು, ಲೋಕಸಭೆಗೆ ಐದು ಮಂದಿ ಸಂಸದರು ಆಯ್ಕೆಯಾಗುತ್ತಿದ್ದಾರೆ.

ಪ್ರಬುದ್ದ ಭಾರತ ನಿರ್ಮಾಣವಾಗಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಸರ್ವರಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಇನ್ನು ಸಿಕ್ಕಿಲ್ಲ. ದೇಶದ ಎಲ್ಲ ಜನರಲ್ಲಿ ಭಾತೃತ್ವದ ಭಾವನೆ ಮೂಡಿದಾಗ ಐಕ್ಯತೆ, ಸಮಗ್ರತೆ ಉಳಿಯಲು ಸಾಧ್ಯವಾಗುತ್ತದೆ ಎಂದರು.

Facebook Comments