ಸರ್ಕಾರಿ ಗೌರವಗಳೊಂದಿಗೆ ಶಾಸಕ ನಾರಾಯಣ ರಾವ್ ಅಂತ್ಯಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೀದರ್,ಸೆ.25- ನಿನ್ನೆ ನಿಧನರಾದ ಕಾಂಗ್ರೆಸ್ ಶಾಸಕ ಬಿ.ನಾರಾಯಣ ರಾವ್ ಅವರ ಅಂತ್ಯಕ್ರಿಯೆ ಇಂದು ಬಸವ ಕಲ್ಯಾಣದದ ಸಸ್ತಾಪುರ ಬಂಗ್ಲಾ ಸಮೀಪದ ಬೊಕ್ಕೆ ಲೇಔಟ್‍ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಾರಾಯಣ ರಾವ್ ಅವರು ಮೃತಪಟ್ಟಿದ್ದು, ಅವರ ಪಾರ್ಥಿವ ಶರೀರವನ್ನು ಅಂಬುಲೆನ್ಸ್ ಮೂಲಕ ಹೈದರಾಬಾದ್ ಮಾರ್ಗವಾಗಿ ಬಸವಕಲ್ಯಾಣಕ್ಕೆ ಕೊಂಡೊಯ್ದು ಕೋವಿಡ್-19 ಸರ್ಕಾರ ಮಾರ್ಗಸೂಚಿಗಳನ್ನು ಪಾಲಿಸಿ ಜಿಲ್ಲಾಡಳಿತದ ವತಿಯಿಂದ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಜಿಲ್ಲಾಡಳಿತ ಬಿ.ನಾರಾಯಣರಾವ್ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಹಾಗೂ ಮೆರವಣಿಗೆಗೆ ಅವಕಾಶ ಕಲ್ಪಿಸಿರಲಿಲ್ಲ. ಎಲ್ಲರೂ ಮನೆಯಲ್ಲೇ ಇದ್ದು ಶಾಸಕರಿಗೆ ಗೌರವ ಸಲ್ಲಿಸಬೇಕು ಎಂದು ಜಿಲ್ಲಾಡಳಿತ ಈ ಮೊದಲೇ ಮನವಿ ಮಾಡಿಕೊಂಡಿತ್ತು.

ಕುಟುಂಬದವರು, ಆಪ್ತರು, ಮತಕ್ಷೇತ್ರದ ಜನರು, ಕಾರ್ಯಕರ್ತರ ಅಶ್ರುತರ್ಪಣದ ನಡುವೆ ನಾರಾಯಣ ರಾವ್ ಅವರು ಅಂತ್ಯಕ್ರಿಯೆ ನೆರವೇರಿತು.

Facebook Comments

Sri Raghav

Admin