ರಾಜಕೀಯ ವೇಷ ಕಳಚಿಟ್ಟು ಶ್ರೀಕೃಷ್ಣನಾದ ಶಾಸಕ

ಈ ಸುದ್ದಿಯನ್ನು ಶೇರ್ ಮಾಡಿ

ಬಂಗಾರಪೇಟೆ, ಏ.28- ಕಳೆದ ಒಂದು ತಿಂಗಳಿನಿಂದ ಲೋಕಸಭಾ ಚುನಾವಣೆ ಅಖಾಡದಲ್ಲಿ ಬ್ಯುಸಿಯಾಗಿದ್ದ ಶಾಸಕರು ಚುನಾವಣೆ ಮುಗಿದ ನಂತರ ರಿಲ್ಯಾಕ್ಸ್ ಮೊರೆ ಹೋಗಿದ್ದಾರೆ. ಆದರೆ ಇಲ್ಲೊಬ್ಬ ಶಾಸಕರು ರಾಜಕೀಯ ವೇಷ ಕಳಚಿಟ್ಟು ನಾಟಕದಲ್ಲಿ ಕೃಷ್ಣನ ಪಾತ್ರದಲ್ಲಿ ಮಿಂಚಿದ್ದಾರೆ.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ಅವರು ಕೃಷ್ಣನ ಪಾತ್ರಧಾರಿಯಾಗಿ ಮಿಂಚುವ ಮೂಲಕ ರಾಜಕೀಯಕ್ಕೂ ಸೈ , ನಾಟಕಕ್ಕೂ ಸೈ ಎನಿಸಿಕೊಂಡಿದ್ದಾರೆ.

ಬಂಗಾರಪೇಟೆ ಕ್ಷೇತ್ರದ ಬೂದಿಕೋಟೆಯಲ್ಲಿ ಕರಗ ಪ್ರಯುಕ್ತ ಸಾಮ್ರಾಟ್ ಸುಯೋಧನ ಎಂಬ ಪೌರಾಣಿಕ ನಾಟಕವನ್ನು ಹಮ್ಮಿಕೊಳ್ಳಲಾಗಿತ್ತು. ಈ ನಾಟಕದಲ್ಲಿ ಶಾಸಕ ನಾರಾಯಣ ಸ್ವಾಮಿ ಅವರು ಕೃಷ್ಣನ ವೇಷಧಾರಿಯಾಗಿ ನಾಟಕದಲ್ಲಿ ನಟಿಸುವ ಮೂಲಕ ಸಾರ್ವಜನಿಕರಿಂದ ಭೇಷ್ ಎನಿಸಿಕೊಂಡಿದ್ದಾರೆ.

ಶಾಸಕರ ಜತೆ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ , ಜಿಲ್ಲಾ ಪಂಚಾಯ್ತಿ ಸದಸ್ಯರು ಕೂಡ ನಾಟಕದಲ್ಲಿ ಅಭಿನಯಿಸಿದ್ದು , ನಾಟಕ ವೀಕ್ಷಣೆಗೆ ಬಂದಿದ್ದ ಕ್ಷೇತ್ರದ ಗ್ರಾಮಸ್ಥರು ಜನಪ್ರತಿನಿಧಿಗಳ ನಟನೆಗೆ ಮಾರು ಹೋಗಿ ರಾತ್ರಿ ಇಡೀ ಕುಳಿತು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ