ಬಡವರ ಮನೆ ಬಾಗಿಲಿಗೆ ಬಂದು ಸಮಸ್ಯೆ ಆಲಿಸಿದ ಶಾಸಕ

ಈ ಸುದ್ದಿಯನ್ನು ಶೇರ್ ಮಾಡಿ

ಶಿರಾ , ಮಾ.29- ಶಿರಾ ಕ್ಷೇತ್ರದ ಇತಿಹಾಸದಲ್ಲಿ ಪ್ರಥಮ ಭಾರಿಗೆ ಶಾಸಕರೊಬ್ಬರು ಸರ್ಕಾರಿ ಬಸ್ಸಿನಲ್ಲಿ ಕುಳಿತು ಸಾಮಾನ್ಯ ಪ್ರಯಾಣಿಕರಂತೆ ಇತರೆ ಸ್ನೇಹಿತರೊಂದಿಗೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಚಿನ್ನೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಲ್ಲದಿಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿ ಜನಮೆಚ್ಚುಗೆ ಪಡೆದಿದ್ದಾರೆ.

ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಶಾಲೆಯ ಬಿಸಿಯೂಟ ದವರು ಸಿದ್ದ ಪಡಿಸಿದ ಅನ್ನ ಮತ್ತು ಸೊಪ್ಪಿನ ಸಾರು ಸೇವನೆ ಮಾಡಿದರು. ನಂತರ ನೆಲ್ಲದಿಮ್ಮಹಳ್ಳಿ ದಲಿತ ಕಾಲೂನಿಗೆ ತೆರೆಳಿದರು. ಶಾಸಕರ ನಿರೀಕ್ಷೆಯಲ್ಲಿದ್ದ ಬಡ ಕುಟುಂಬಗಳು ಕಳೆದ 20 ವರ್ಷಗಳಿಂದ ಈ ಕಾಲೂನಿಯಲ್ಲಿ ಗುಡಿಸಲು ಹಾಕಿ ಕೊಂಡು ವಾಸ ಮಾಡುತ್ತಿದ್ದೇವೆ, ಸರ್ಕಾರ ನಮಗೆ ನಿವೇಶನ ಹಕ್ಕು ಪತ್ರ ನೀಡಿಲ್ಲ ಬದುಕು ಕಷ್ಟವಾಗಿದೆ ಎಂದು ಅಲವತ್ತುಕೊಂಡರು.

ಇದಕ್ಕೆ ಸ್ಪಂದಿಸಿದ ಶಾಸಕರು ತಕ್ಷಣ ತಹಸೀಲ್ದಾರ್‍ರವರಿಗೆ ಕರೆ ಮಾಡಿ ಈ ಬಡ ಕುಟುಂಬಗಳಿಗೆ ನಿವೇಶನ ಹಕ್ಕು ಪತ್ರ ವಿತರಿಸುವಂತೆ ಸೂಚಿಸಿದರು. ಕಾಲೂನಿ ಪ್ರದಕ್ಷಿಣೆ ಹಾಕುವ ವೇಳೆ ಅಂದ ವೃದ್ಧೆಯನ್ನು ಗಮನಿಸಿದ ಶಾಸಕರು ಅಮ್ಮ ನಿಮಗೆ ಪಿಂಚಣಿ ಬರುತ್ತಿದೆಯ ಎಂದು ಪ್ರಶ್ನೆ ಮಾಡಿದರು ಇಲ್ಲ ನಮ್ಮಂತವರಿಗೆ ಯಾರೂ ಪಿಂಚಣಿ ಮಾಡಿಸಿ ಕೊಡುವುದಿಲ್ಲ ಸ್ವಾಮಿ ಎಂದರು ಈ ವೃದ್ಧೆಯಿಂದ ತಕ್ಷಣ ದಾಖಲಾತಿ ಪತ್ರಗಳನ್ನು ಪಡೆದರು ಇನ್ನೂ ಎರಡು, ಮೂರು ದಿನಗಳಲ್ಲಿ ಪಿಂಚಣಿ ಮಂಜೂರು ಪತ್ರ ನೀಡುವ ಭರವಸೆ ನೀಡಿದರು.

ಬೈಕ್‍ನಲ್ಲಿ ಸಂಚಾರ..! :
ಈ ಭಾಗದ ಗಡಿ ಭಾಗದಲ್ಲಿ ಬಿದ್ದ ಮಳೆ ನೀರು ವ್ಯಾರ್ಥವಾಗಿ ಹೋಗುತ್ತಿದ್ದು ಮಳೆ ನೀರು ತಡೆದು ಅಂತರ್ಜಲ ವೃದ್ಧಿ ಮಾಡುವ ಅತ್ಯವಶ್ಯಕತೆ ಇದೆ ನೋಡಿ ಬನ್ನಿ ಎಂಬ ಗ್ರಾಮಸ್ಥರ ಮನವಿಗೆ ಸ್ಪಂಧಿಸಿದ ಶಾಸಕ ರಾಜೇಶ್ ಗೌಡ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ಚಿನ್ನೇನಹಳ್ಳಿ ಸೇರಿದಂತೆ ಸುತ್ತ ಮುತ್ತಲ ರೈತರ ಜಮೀನುಗಳನ್ನು ವಿಕ್ಷಣೆ ಮಾಡಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅವಶ್ಯಕತೆ ಇರುವ ಕಡೇ ಚೆಕ್ ಡ್ಯಾಂ ಮಂಜೂರು ಮಾಡಿಸಿ ಕೊಡುವುದಾಗಿ ಹೇಳಿದರು.

ತಡರಾತ್ರಿವರೆಗೂ ಜನರ ಸಮಸ್ಯೆ ಕೇಳಿದ ಶಾಸಕ : ನೆಲ್ಲದಿಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಶಾಸಕರು ಸಂಜೆ ನೆಲ್ಲದಿಮ್ಮನಹಳ್ಳಿ, ಚಿನ್ನೇನಹಳ್ಳಿ, ರಂಗನಹಳ್ಳಿ ಗ್ರಾಮಗಳ ಪ್ರದಕ್ಷಣೆ ವೇಳೆ ನೂರಾರು ಜನ ಗ್ರಾಮದ ಅಭಿವೃದ್ಧಿ, ರಸ್ತೆ, ಕುಡಿಯುವ ನೀರು, ಬಸ್ಸಿನ ಸೌಲಭ್ಯ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಮನವಿ ನೀಡಿ ಶಾಸಕರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೇ ನೀಡಿದ ಶಾಸಕರು ನಿಮ್ಮ ಸಮಸ್ಯೆಗಳ ನನಗೆ ನೇರವಾಗಿ ಅರ್ಥವಾಗಿದೆ, ಹಂತ ಹಂತವಾಗಿ ಬಗೆ ಹರಿಸುತ್ತೇನೆ ನಿಮ್ಮ ಸಹಕಾರ ಪ್ರೀತಿ ವಿಶ್ವಾಸ ನನಗೆ ಹೆಚ್ಚು ಜವಾಬ್ದಾರಿ ತಂದಿದೆ ಎಂದರು.

ಊಟದ ಎಲೆ ಎತ್ತಿ ಶಾಲಾ ಆವರಣ ಸ್ವಚ್ಚಗೊಳಿಸಿದ ಶಾಸಕ :
ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಶಾಸಕ ರಾಜೇಶ್‍ಗೌಡ ಸಾಮಾನ್ಯ ವ್ಯಕ್ತಿಯಂತೆ ಶಾಲಾ ಕೊಠಡಿಯಲ್ಲಿ ಮಲಗಿ ನಿದ್ರಿಸಿದರು. ಮುಂಜಾನೆ ವಾಯು ವಿಹಾರಕ್ಕೆ ತೆರಳಿ ಮತ್ತೆ ಜನರೊಡನೆ ಬೆರತು ಸಮಸ್ಯೆ ಕೇಳಿದರು. ತದ ನಂತರ ತಿಂಡಿ ಸೇವನೆ ಮಾಡಿ ಗ್ರಾಮ ವಾಸ್ತವ್ಯ ಮುಗಿಸಿ ಹೊರಡುವ ವೇಳೆ ಶಾಲೆಯ ಆವರಣ ಸ್ವಚ್ಛಗೊಳಿಸಿ ಮಾದರಿಯಾಗಿದ್ದಾರೆ.

Facebook Comments