ಯಡಿಯೂರಪ್ಪ ನಮ್ಮ ಕ್ಯಾಪ್ಟನ್, ನಾವೆಲ್ಲರೂ ಅವರ ಜೊತೆಯಲ್ಲೇ ಇದ್ದೇವೆ : ರಾಮದಾಸ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.30-ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಕ್ಯಾಪ್ಟನ್. ಅವರು ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ, ನಾವೆಲ್ಲರೂ ಅವರ ಜೊತೆಯಲ್ಲೇ ಇದ್ದೇವೆ ಎಂದು ಮಾಜಿ ಸಚಿವ ರಾಮದಾಸ್ ಹೇಳಿದ್ದಾರೆ. ನಗರದ ಅರಮನೆ ಆವರಣದಲ್ಲಿ ದಸರಾ ಅಂಗವಾಗಿ ಇಂದು ಬೆಳಗ್ಗೆ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.

ದಾವಣಗೆರೆಯಲ್ಲಿ ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪನವರು ಹಗ್ಗದ ಮೇಲೆ ನನ್ನ ನಡಿಗೆ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡುವಷ್ಟು ದೊಡ್ಡವನು ನಾನಲ್ಲ. ಆದರೆ ಯಡಿಯೂರಪ್ಪ ನಮ್ಮ ನಾಯಕರು. ನಮಗೆ ಸ್ಥಾನಮಾನ ಸಿಗಲಿ, ಬಿಡಲಿ ರಾಜ್ಯದ ಅಭಿವೃದ್ಧಿಗೆ ಸದಾ ನಾವು ಅವರೊಂದಿಗೆ ಇರುತ್ತೇವೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಯಾದವರಿಗೆ ಒತ್ತಡ ಇದ್ದೇ ಇರುತ್ತದೆ. ನಾನು ಯಾವುದೇ ಅಧಿಕಾರಕ್ಕೆ ಆಸೆ ಪಟ್ಟವನಲ್ಲ. ನಮಗೆ ಪಕ್ಷ ಮುಖ್ಯ. ನಾವು ಹಸಿದುಕೊಂಡಿದ್ದರೂ ಬೇರೆಯವರಿಗೆ ಊಟ ಹಾಕುವುದು ನಮ್ಮ ಸಂಸ್ಕøತಿ. ನಮ್ಮ ನಾಯಕರಾದ ಯಡಿಯೂರಪ್ಪನವರು ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ.

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ರಾಮ್‍ದಾಸ್ ಅವರಿಗೆ ಅವಕಾಶ ಸಿಗದಿದ್ದಕ್ಕೆ ಬೇಸರಗೊಂಡಿದ್ದ ಅವರು, ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿದ್ದರು. ವಿ.ಸೋಮಣ್ಣ ಅವರಿಗೆ ಮೈಸೂರು ಉಸ್ತುವಾರಿ ನೀಡಿದ್ದರಿಂದ ದಸರಾದ ಹಲವು ಪ್ರಾರಂಭಿಕ ಕಾರ್ಯಕ್ರಮಗಳಿಂದ ದೂರ ಉಳಿದು, ತಮ್ಮ ಅಸಮಾಧಾನ ಹೊರಹಾಕಿದ್ದರು. ಈಗ ಯಡಿಯೂರಪ್ಪ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೆ, ನಾವು ಹಸಿದುಕೊಂಡಿದ್ದರೂ ಹೊರಗಿನಿಂದ ಬಂದವರಿಗೆ ಊಟ ಹಾಕುವುದು ನಮ್ಮ ಸಂಸ್ಕøತಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅನರ್ಹರನ್ನು ಬೆಂಬಲಿಸಿದ್ದಾರೆ.

ನಿನ್ನೆ ಶಾಸಕ ಉಮೇಶ್ ಕತ್ತಿ ಅವರು ಅನರ್ಹರ ಕುರಿತು ಹೇಳಿಕೆ ನೀಡಿ, ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ.ಬೆಳಗಾವಿ ಜಿಲ್ಲೆ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಹೇಳಿ ಅನರ್ಹರಿಗೆ ಟಾಂಗ್ ನೀಡಿದ್ದರು.

Facebook Comments