‘ಅನಿರೀಕ್ಷಿತವಾಗಿ ಬರುವ ಅತಿಥಿಗಳಿಗೆ ಅವಕಾಶ ನೀಡಬೇಕಿದೆ’ : ರಾಮದಾಸ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಆ.29- ನನಗೆ ಅಪಘಾತವಾದ್ದರಿಂದ ದಸರಾ ಕಾರ್ಯಕ್ರಮಗಳಿಂದ ದೂರ ಉಳಿದಿದ್ದೆ. ಯಾವುದೇ ಗೊಂದಲ, ಭಿನ್ನಾಭಿಪ್ರಾಯ ಇಲ್ಲ ಎಂದು ಶಾಸಕ ರಾಮದಾಸ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ನಮ್ಮದು ಈಗ ಪೂರ್ಣ ಪ್ರಮಾಣದ ಸರ್ಕಾರವಿಲ್ಲ. ಅನಿರೀಕ್ಷಿತವಾಗಿ ಬರುವ ಅತಿಥಿಗಳಿಗೆ ನಾವು ಅವಕಾಶ ನೀಡಬೇಕಿದೆ.

ಈ ನಿಟ್ಟಿನಲ್ಲಿ ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಹೇಳುವ ಮೂಲಕ ರಾಮದಾಸ್ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಪರಿಸ್ಥಿತಿ ಒಂದೇ ರೀತಿ ಇರಲು ಸಾಧ್ಯವಿಲ್ಲ.

ಮೈತ್ರಿ ಸರ್ಕಾರವಿದ್ದಾಗ ಅಲ್ಲಿನ ವ್ಯವಸ್ಥೆಯನ್ನು ನೋಡಿ ಬೇಸತ್ತು ರಾಜೀನಾಮೆ ನೀಡಿದ ಕೆಲ ಶಾಸಕರು ಈಗ ಅನರ್ಹರಾಗಿದ್ದು, ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಎದುರು ನೋಡುತ್ತಿದ್ದೇನೆ. ಅವರನ್ನು ಅತಿಥಿ ರೀತಿಯಲ್ಲಿ ನಾವು ಕಾಣುತ್ತೇವೆ ಎಂದರು.

Facebook Comments