ಶಾಸಕ ರಾಮ್‍ದಾಸ್ ಆಪ್ತ ಸಹಾಯಕರಿಗೆ ಕೊರೊನ ಸೋಂಕು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜು.10- ಕೆ.ಆರ್.ಪುರಂ ಶಾಸಕ ರಾಮ್‍ದಾಸ್ ಅವರ ಇಬ್ಬರು ಆಪ್ತ ಸಹಾಯಕರಿಗೆ ಕೊರೊನಾ ತಗುಲಿರುವ ಸಾಧ್ಯತೆ ಇದೆ.  ಜ್ವರದಿಂದ ಬಳಲುತ್ತಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದೆ. ಗಂಟಲು ದ್ರವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ನಾಳೆ ವರದಿ ಬರುವ ಸಾಧ್ಯತೆ ಇದೆ.

ಆದರೂ ಸಹ ಈ ಇಬ್ಬರಿಗೆ ಹೋಂ ಕ್ವಾರಂಟೈನ್‍ನಲ್ಲಿರುವ ತಿಳಿಸಲಾಗಿದೆ. ಇದರಿಂದ ಶಾಸಕ ರಾಮ್‍ದಾಸ್ ಅವರಿಗೂ ಸೋಂಕು ತಗುಲಿರಬಹುದೆಂದು ಹೇಳಲಾಗುತ್ತಿದೆ.

Facebook Comments