ಫಲಿತಾಂಶ ಬರವವರೆಗೂ ಏನೂ ಹೇಳಲು ಸಾಧ್ಯವಿಲ್ಲ: ಶಾಸಕ ರಾಮ್‍ದಾಸ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಡಿ.7-ಈ ಬಾರಿಯ ಉಪಚುನಾವಣೆಯಲ್ಲಿ 9 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಶಾಸಕ ರಾಮ್‍ದಾಸ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಜಾತಿ ಆಧಾರದ ಮೇಲೆ ಬಿಜೆಪಿ ಒಂದೇ ಅಲ್ಲ, ಎಲ್ಲಾ ಪಕ್ಷಗಳು ಸಹ ಮತಯಾಚಿಸಿವೆ. ಹಾಗಾಗಬಾರದಿದ್ದು ನನಗೂ ಈ ಬಗ್ಗೆ ಬೇಸರವಿದೆ.

ಜಾತಿ ಆಧಾರದ ಮೇಲೆ ಮತಯಾಚನೆ ನಡೆಯಬಾರದು. ಜನತೆ ಒಂದು ತೀರ್ಮಾನ ಕೈಗೊಂಡು ಜಾತಿ ಬಿಟ್ಟು ಕರ್ನಾಟಕ ಅಭಿವೃದ್ಧಿ ಹಿನ್ನೆಲೆಯಲ್ಲಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ತಿಳಿಸಿದರು. ಹುಣಸೂರು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ವಿಫಲವಾಗಿಲ್ಲ. ಒಳ್ಳೆ ಕೆಲಸ ಮಾಡಿ ಮತದಾರರನ್ನು ಸೆಳೆಯುವಲ್ಲಿ ಗಮನಸೆಳೆದಿದ್ದಾರೆ. ಆದರೆ ಫಲಿತಾಂಶ ಬರವವರೆಗೂ ಏನೂ ಹೇಳಲು ಸಾಧ್ಯವಿಲ್ಲ. ಹುಣಸೂರಿನಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಮ್‍ದಾಸ್, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದರು. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಪಕ್ಷ ನನಗೆ ನೀಡಿದ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವೆ. ಇದಕ್ಕಿಂತ ಉನ್ನತ ಹುದ್ದೆ ನೀಡಿದರೆ ಅದನ್ನೂ ನಿರ್ವಹಿಸಲು ಬದ್ಧನಾಗಿದ್ದೇನೆ. ನನಗೆ ಸಚಿವ ಸ್ಥಾನ ಬೇಕೆಂದು ಯಾವ ಒತ್ತಾಯವನ್ನೂ ವರಿಷ್ಠರ ಮುಂದಿಡುವುದಿಲ್ಲ ಎಂದರು.

Facebook Comments