ಕಗ್ಗದಾಸಪುರ ಕೆರೆ ಅಭಿವೃದ್ಧಿಗೆ ಶಾಸಕ ಎಸ್.ರಘು ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕೆರೆ ಜಾಗ ಕಬಳಿಸಿದವರು ಯಾರೇ ಆಗಲಿ ರಾಜೀ ಇಲ್ಲ ಅವರ ವಿರುದ್ಧ ಕಾನೂನು ಬದ್ಧವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್.ಸಿ.ವಿ.ರಾಮನ್ ನಗರ ಕ್ಷೇತ್ರದ ಶಾಸಕ ಎಸ್.ರಘು ಎಚ್ಚರಿಸಿದರು. ಸಿ.ವಿ. ರಾಮನ್ ನಗರ ಕ್ಷೇತ್ರದ ಕಗ್ಗದಾಸಪುರ ಕೆರೆ, ಕೆರೆ ಗದ್ದೆ, ನಡಿಗೆ ಮಾರ್ಗ, ಅಣೆಕಟ್ಟು , ಒಳಚರಂಡಿ, ತ್ಯಾಜ್ಯ ಸೇರಿದಂತೆ ಕೆರೆ ಸುಧಾರಣೆ ಅಭಿವೃದ್ಧಿಗೆ ಶಾಸಕರ ನವನಗರೋತ್ಥಾನ ಅನುದಾನದಡಿಯಲ್ಲಿ 8 ಕೋಟಿರೂ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

ನಿಮ್ಮ ಜಾಗಗಳಿಗೆ ನೀವೆ ಹೊಣೆ, ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡವರು ತಾವಾಗಿಯೇ ತೆರುವುಕೊಳ್ಳಿಸಿಕೊಳಬೇಕು, ಇಲ್ಲದಿದ್ದರೆ ಇಲಾಖೆಯ ಮೂಲಕ ಕಾನೂನು ಕ್ರಮ ಕೈಕೊಂಡು ತೆರವುಕೊಳ್ಳಿಸಲಾಗುವುದು ಎಂದು ಎಚ್ಚರಿಸಿದರು. ಕನಸಿನ ಕೂಸಾಗಿದ್ದ ಈ ಕೆರೆಯ ಅಭಿವೃದ್ಧಿಗೆ ನಾನು ಪಾಲಿಕೆ ಸದಸ್ಯನಾಗಿದ್ದಾಗಲಿಂದಲ್ಲೂ ಪ್ರಯತ್ನ ಮಾಡಿದ್ದೆ. ಕೆಲವರು ಕೆರೆ ಮಾಡಬಾರದೆಂದು ಹೋರಾಟ ನಡೆಸಿ ಕೋರ್ಟಿನಲ್ಲಿ ಕೇಸ್ ದಾಖಲಿಸಿದರು. ಅದರೆ ಈಗ ಕೋರ್ಟ್ ಮಹತ್ವದ ತೀರ್ಪು ನೀಡುವ ಮೂಲಕ ನಾವು ವಿಜಯಶಾಲಿಗಾಳಾಗಿದ್ದೇವೆ ಎಂದರು.

ನಗರದ ಕೆರೆಗಳನ್ನು ಉಳಿಸಿಕೊಳ್ಳಬೇಕು. ಇದರಿಂದ ಸುತ್ತಮುತ್ತಲಿನ ಪರಿಸರ ತಂಪಾಗಿರಲಿದೆ. ಅಂತರ್ಜಾಲ ಮಟ್ಟ ಹೆಚ್ಚುವುದರ ಜೊತೆಗೆ ಸುತ್ತಲಿನ ಪ್ರದೇಶಗಳಿಗೆ ಉಪಯೋಗವಾಗಲ್ಲಿದೆ. ಹಾಗಾಗಿ ಮಳೆಗಾಲ ಬರುವ ಮುನ್ನವೇ ಕಾಮಗಾರಿಯನ್ನು ಮುಗಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಬಿಬಿಎಂಪಿ ಕೆರೆ ಅಭಿವೃದ್ಧಿ ಕಾರ್ಯ ನಿರ್ವಾಹಕ ಅಧಿಕಾರಿ ರವಿಕುಮಾರ್, ಎಇಇ ಪ್ರಕಾಶ್, ಎಇ ಶಿಲ್ಪ, ಗುತ್ತಿಗೆದಾರರಾದ ವಿಕಾಸ್, ಬೆಂ.ಕೇಂದ್ರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜಾರೆಡ್ಡಿ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

Facebook Comments