“ಇಂಗ್ಲೀಷ್ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ”

ಈ ಸುದ್ದಿಯನ್ನು ಶೇರ್ ಮಾಡಿ

ಅರಸೀಕೆರೆ, ಸೆ.2- ಸ್ವಾತಂತ್ರ ಬಂದು 75 ವರ್ಷಗಳೇ ಕಳೆದರೂ ಖಾಸಗಿ ಶಿಕ್ಷಣಕ್ಕೂ , ಸರ್ಕಾರಿ ಶಾಲಾ ಶಿಕ್ಷಣಕ್ಕೂ ವ್ಯತ್ಯಾಸದೆ ,ಇಂಗ್ಲೀಷ್ ವ್ಯಾಮೋಹಕ್ಕೆ ಬಲಿಯಾಗಿರುವ ಪೋಷಕರು ಸರ್ಕಾರ ಶಾಲೆಗಳೆಂದರೆ ತಾತ್ಸಾರ ಮನೋಭಾವದಿಂದ ನೋಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಹಾರನಹಳ್ಳಿ ಪದವಿಪೂರ್ವ ಕಾಲೇಜ್ ಹಾಗೂ ಪ್ರೌಡ ಶಾಲೆಗೆ 25ಲಕ್ಷರೂ ವೆಚ್ಚದಲ್ಲಿ ನಾಲ್ಕು ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ಸರ್ಕಾರಿ ಶಾಲೆಗಳೂ ಯಾವುದರಲ್ಲೂ ಕಡಿಮೆ ಇಲ್ಲ ಉತ್ತಮ ಶಿಕ್ಷಕರಿದ್ದಾರೆ ಗುಣಮಟ್ಟದ ವಿದ್ಯಾಭ್ಯಾಸದೊಂದಿಗೆ ಆನೇಕ ಸೌಲಭ್ಯಗಳನ್ನು ನೀಡುತ್ತಿದ್ದರೂ ಪೋಷಕರಿಂದ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದರು.

ಒಂದು ವರ್ಷಕ್ಕೆ ಸರ್ಕಾರ ಶಿಕ್ಷಣ ಇಲಾಖೆಗೆ 23 ಸಾವಿರ ಕೋಟಿ ಅನುದಾನ ನೀಡುತ್ತಿದ್ದು ಆ ಪೈಕಿ 21 ಸಾವಿರ ಕೋಟಿಗೂ ಹೆಚ್ಚು ಹಣ ಸಂಬಳಕ್ಕೆ ಹೋಗುತ್ತಿದೆ ಇನ್ನೂಳಿದ 1000, 1200 ಕೋಟಿ ಹಣದಲ್ಲಿ ರಾಜ್ಯದ ಎಲ್ಲಾ ಶಾಲೆಗಳ ರಿಪೇರಿ , ಶೌಚಾಲಯ , ಸುಣ್ಣ-ಬಣ್ಣ ಇವುಗಳೆಲ್ಲವೂ ಆಗಬೇಕಾಗಿದ್ದು ಶಿಕ್ಷಕರು ನಿವೃತ್ತಿಯಾದರೇ ಹೊಸ ನೇಮಕಾತಿಗೆ ಅವಕಾಶಲ್ಲ.

ಶಾಲೆಗಳಲ್ಲಿ ಆನೇಕ ವಿಷಯಗಳಿಗೆ ಉಪಾಧ್ಯಾಯರಿಲ್ಲ ಹಾಗೂ 3000ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಯಾಗಬೇಕಾಗಿದೆಯಾದರೂ ಅವರನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಹಣಕಾಸು ಇಲಾಖೆಯಿಂದ ಅನುಮತಿ ದೊರೆಯುವುದಿಲ್ಲ ಇಂತಹ ದುಸ್ಥಿತಿಯಲ್ಲಿ ಸರ್ಕಾರಿ ಶಾಲಾ ಮಕ್ಕಳೂ ವಿದ್ಯಾಭ್ಯಾಸ ಮಾಡಬೇಕಾದಂತಹ ಪರಿಸ್ಥಿತಿ ಇದೆ ಎಂದು ವಿಷಾಸಿದರು.

ಆದ್ದರಿಂದ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗೊಂದರಂತೆ ಪಬ್ಲಿಕ್ ಶಾಲೆಗಳನ್ನು ತೆರೆದು ಎಲ್‍ಕೆಜಿ , ಯುಕೆಜಿ ಒಂದು ಎರಡನೇಯ ತರಗತಿಯಿಂದಲೇ ಇಂಗ್ಲೀಷ್‍ನ್ನು ಬೋಸುವ ಮೂಲಕ ಬಡಮಕ್ಕಳಿಗೂ ಇಂಗ್ಲೀಷ್ ಕಲಿಯಲು ಅನುಕೂಲ ಕಲ್ಪಿಸಬೇಕು ಎಂದು ವಿನಂತಿಸಿದ ಅವರು, ಕಾಮಗಾರಿಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಕೊಡುವ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವಂತೆ ಇದೇ ಸಂದರ್ಭದಲ್ಲಿ ಮನಮಾಡಿದರು.

ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತು ತಾಲೂಕಿನಾದ್ಯಂತ ಪ್ರೌಡಶಾಲೆಗಳು, ಪ್ರಥಮ ದರ್ಜೆ ಕಾಲೇಜುಗಳು, ಪದವಿ ಕಾಲೇಜುಗಳನ್ನು ತೆರೆಯಲಾಗಿದೆ ಅಲ್ಲದೆ ಬಡ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂದು ವಸತಿ ಶಾಲೆಗಳನ್ನು ತೆರೆದು ಅನುಕೂಲ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಜನರ ಬಹುದಿನಗಳ ಬೇಡಿಕೆಯಾಗಿದ್ದ ಎಂಜಿನಿಯರಿಂಗ್ ಕಾಲೇಜು ಹಲವು ಎಡರು ತೊಡರುಗಳ ನಡುವೆಯು ನಿರ್ಮಾಣ ಹಂತದಲ್ಲಿದೆ ಎಂದರು. ಕ್ಷೇತ್ರ ಶಿಕ್ಷಣಾಕಾರಿ ಮೋಹನ್ ಕುಮಾರ್ , ಪ್ರಾಂಶುಪಾಲ ಮನೋಹರ್ ,ಗೀಜಿಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಧರ್ಮೇಶ್ ,ಜೆ.ಡಿ.ಎಸ್ ಮುಖಂಡರಾದ ಯಳವಾರೆ ಕೇಶವಣ್ಣ ,ದೇವರಾಜ್ , ರಜಿನಿ , ಪ್ರಭುನಾಯ್ಕ್ , ಗ್ರಾ.ಪಂ ಉಪಾಧ್ಯಕ್ಷ ಸೂಫಿಯಾನ್ , ಹಾರನಹಳ್ಳಿ ಗ್ರಾ.ಪಂ ಪಿ.ಡಿ.ಒ ವಸಂತ ಪ್ಯಾಟಿ , ಸರ್ಕಾರಿ ಪಾ.ಪೂ ಕಾಲೇಜಿನ ಉಪನ್ಯಾಸರು,ಸಿಬ್ಬಂಗಳು ಹಾಗೂ ಗ್ರಾ.ಪಂ ಸದಸ್ಯರುಗಳು ಮತ್ತು ಗ್ರಾಮಸ್ಥರು ಇನ್ನಿತರರು ಹಾಜರಿದ್ದರು

Facebook Comments

Sri Raghav

Admin