“ಹೇಗೋ ಕೆಲದಿನ ಇಡ್ಲಿ-ದೋಸೆ ಬುಡ್ಕೊಂಡು, ಅನ್ನ ತಿಂದ್ಕೊಂಡು ಕಾಲ ಕಳೀರಿ”

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ ; ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಶಾಸಕರಾದ ಶಿವಲಿಂಗೇಗೌಡರು ಗ್ರಾಮೀಣ ಶೈಲಿಯ ಮಾತುಗಾರಿಕೆಗೆ ಪ್ರಸಿದ್ಧಿ..! ಸದನದ ಕಲಾಪ ವಿರಲಿ ಅಥವಾ ಗ್ರಾಮದಲ್ಲಿ ಭಾಷಣವೇ ಆಗಿರಲಿ ಜನರನ್ನು ತಮ್ಮತ್ತ ಸೆಳೆಯುವಲ್ಲಿ ವಿಭಿನ್ನ ಛಾಪು ಮೂಡಿಸಿದ್ದಾರೆ.

ಇತ್ತೀಚೆಗೆ ಅರಸೀಕೆರೆ ತಾಲೂಕಿನ ಗ್ರಾಮದಲ್ಲಿ ಕೊರೋನಾ ಹಾವಳಿ ಕಾರಣ ಲಾಕ್ ಡೌನ್ ‌ಹಿನ್ನೆಲೆಯಲ್ಲಿ ಆರ್ಥಿಕವಾಗಿ ನೊಂದ ಜನರಿಗೆ ನೆರವು ನೀಡುವ ಹಾಗೂ ಗ್ರಾಮದ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತ ; ಸರ್ಕಾರ ಹಾಗೂ ನಮ್ಮಿಂದ ನಿಮಗೆ ಅಗತ್ಯ ನೆರವು ಸಿಗಲಿದೆ “ಹೇಗೋ …” ಕೆಲದಿನಗಳ ಕಾಲ ಸರ್ಕಾರ ನೀಡುವ ಅಕ್ಕಿಯಿಂದ ಇಡ್ಲಿ-ದೋಸೆ ಮಾಡಿಕೊಂಡು ತಿಂದು ಕಾಲ ಕಳೆಯಿರಿ ಮುಂದಿನ ದಿನಗಳಲ್ಲಿ ತಿಂಗಳಿಗೆ ದುಪ್ಪಟ್ಟು ಸಂಪಾದನೆ ಮಾಡುವಿರಂತೆ” ಎಂದು ತಮ್ಮದೇ ಶೈಲಿಯಲ್ಲಿ ಜನರ ಮನಮುಟ್ಟುವಂತೆ ಸಲಹೆ ನೀಡಿರುವ ವಿಡಿಯೋ ಇದೀಗಾ ವೈರಲ್ ಆಗಿದೆ‌.

ಕೊರೋನಾ ಸೋಂಕಿನ ಸಂಬಂಧ ಯಾವ-ಯಾವ ದೇಶಗಳು ನಷ್ಟ ಅನುಭವಿಸಿದೆ; ಎಷ್ಟು ಪ್ರಮಾಣದಲ್ಲಿ ಸಾವು ನೋವನ್ನು ಕಂಡಿವೆ ..! ಎಂಬ ಮಾಹಿತಿಯನ್ನು ತಮ್ಮದೇ ಶೈಲಿಯಲ್ಲಿ ಗ್ರಾಮದ ಜನರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದಾರೆ.

ಅಮೆರಿಕದಲ್ಲಿ ಅಲ್ಲಿನ ಅಧ್ಯಕ್ಷ ಟ್ರಂಪ್ ಮಾಡಿದ ಎಡವಟ್ಟಿನಿಂದ ಇಂದು ಸಾವಿರ ಜನ ಸಾವಿಗಿಡಾಗಿದ್ದು; ಲಕ್ಷಾಂತರ ಜನ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಇಟಲಿ ಹಾಗೂ ಜರ್ಮನಿಯಲ್ಲಿ ಸರಿಯಾದ ಕಾಲಕ್ಕೆ ಲಾಕ್ ಡೌನ್ ಮಾಡದ ಹಿನ್ನೆಲೆ ಸಾವಿರಾರು ಜನ ಪ್ರಾಣ ತೆತ್ತಿದ್ದಾರೆ.

ಆದರೆ ಭಾರತದಲ್ಲಿ ಲಾಕ್ ಡೌನ್ ಮಾಡಿದ ಕಾರಣ ಸಾವಿನ ಪ್ರಮಾಣ ತೀರಾ ಕಡಿಮೆಯಾಗಿದೆ .ಇಂದೇ ಲಾಕ್ ಡೌನ್‌ ಸಡಿಲಿಸಿ ಬಸ್ ವಿಮಾನ ಬಿಡಿ ಎಂದು ಹಟ ಮಾಡದೆ ಸರ್ಕಾರದೊಂದಿಗೆ ಸಹಕರಿಸಿ ಎಂದು ಶಿವಲಿಂಗೇ ಗೌಡರು ಮನವಿ ಮಾಡಿದರು.

Facebook Comments

Sri Raghav

Admin