“ನನ್ನ ಕ್ಷೇತ್ರದ ತಂಟೆಗೆ ಬಂದವರ ಕೈ ಕತ್ತರಿಸುತ್ತೇನೆ”

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಅ.20- ನನ್ನ ಕ್ಷೇತ್ರದ ತಂಟೆಗೆ ಬಂದವರ ಕೈ ಕತ್ತರಿಸುತ್ತೇನೆ ಎಂದು ಶಾಸಕ ಶಿವಶಂಕರರೆಡ್ಡಿ ಇಂದಿಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿರೇಬಿದನೂರಿನಲ್ಲಿಂದು ಮಾತನಾಡಿದ ಅವರು, ಮಂಚೇನಹಳ್ಳಿಯನ್ನು ಹೊಸ ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಸುಧಾಕರ್ ಅವರು ಹವಣಿಸುತ್ತಿದ್ದು, ಅದಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ.

ಈ ಹಿಂದೆ ಕಂದಾಯ ಸಚಿವರಾಗಿದ್ದ ದೇಶಪಾಂಡೆ ಅವರು ಇದರ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಡೆ ನೀಡಿದ್ದರು. ಆದರೆ ಈಗ ಮತ್ತೆ ಅದಕ್ಕೆ ಕೈ ಹಾಕಿದ್ದಾರೆ. ಸುಮ್ಮನೆ ತಮ್ಮ ಪಾಡಿಗೆ ಇರದೆ ನಮ್ಮ ಕ್ಷೇತ್ರವನ್ನು ಕಬಳಿಸಲು ಪ್ರಯತ್ನಿಸಿದರೆ ಅವರ ಕೈಯನ್ನೇ ಕತ್ತರಿಸುತ್ತೇನೆ ಎಂದು ಹೇಳಿ ಹೊಸ ವಿವಾದ ಸೃಷ್ಟಿಸಿದ್ದಾರೆ.

Facebook Comments