ರೆಡ್ಡಿ ಮನೆ ಮುಂದೆ ಪ್ರತಿಭಟನೆಗೆ ಯತ್ನಿಸಿದ ಶಾಸಕ ಜಮೀರ್ ಪೊಲೀಸ್ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ,ಜ.13- ಶಾಸಕ ಸೋಮಶೇಖರ್ ರೆಡ್ಡಿ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಶಾಸಕ ಜಮೀರ್ ಅಹ್ಮದ್ ಹಾಗೂ ಹಲವು ಬೆಂಬಲಿಗರನ್ನು ಕಂಟ್ರಿ ಕ್ಲಬ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಮೀರ್ ಆಗಮನದ ಹಿನ್ನೆಲೆ ಇಂದು ಸೋಮಶೇಖರ ರೆಡ್ಡಿ ಮನೆಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಶಾಸಕ ಜಮೀರ್ ಬೆಂಬಲಿಸಿ ಬೆಂಗಳೂರು, ಚನ್ನಪಟ್ಟಣ, ಗುಲಬರ್ಗಾ ಹಾಗೂ ರಾಜ್ಯದ ಹಲವೆಡೆಯಿಂದ ಅನೇಕ ಬೆಂಬಲಿಗರು ಆಗಮಿಸಿದ್ದರು.

ರೆಡ್ಡಿ ನಿವಾಸಕ್ಕೆ ಮೆರವಣಿಗೆ ಮೂಲಕ ಲಗ್ಗೆ ಹಾಕಲು ಜಮೀರ್ ಮತ್ತವರ ಬೆಂಬಲಿಗರು ಸಜ್ಜಾಗಿದ್ದರು. ಅನುಮತಿಯಿಲ್ಲದೇ ಮೆರವಣಿಗೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಜಮೀರ್ ಸೇರಿದಂತೆ 30ಕ್ಕೂ ಹೆಚ್ಚು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸರ ಅನುಮತಿ ಕೇಳಿದ್ದೆ ಕೊಟ್ಟಿಲ್ಲ. ಯಾವುದೇ ಶಾಂತಿಭಂಗ ಮಾಡಲು ನಾವು ಬಂದಿಲ್ಲ. ಉಫ್ ಅಂತ ಊದಿದ್ರೆ ನೀವೆಲ್ಲಾ ಹಾರಿ ಹೋಗ್ತೀರಾ ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದರು. ನಮ್ಮ ವಿರುದ್ಧ ಖಡ್ಗ ತೆಗೆಯುತ್ತೇವೆ ಎಂದಿದ್ದರು. ಅದಕ್ಕೆ ನಾವು ಬಳ್ಳಾರಿಗೆ ಬಂದಿದ್ದೇವೆ ಎಂದರು.

ಪೊಲೀಸರ ತಡೆ ಕುರಿತು ಮಾತನಾಡಿದ ಅವರು, ಇದು ಶಾಂತಿಭಂಗವಲ್ಲ, ಪ್ರತಿಭಟನೆ ಮಾತ್ರ. ಪೊಲೀಸರು ಎಂದರೆ ಬಹಳ ಗೌರವ ಇದೆ. ಬಳ್ಳಾರಿ ಎಸ್ಪಿ ಜೊತೆ ಮಾತನಾಡಿದ್ದೇನೆ. ಪೊಲೀಸರು ನನ್ನನ್ನ ಅರೆಸ್ಟ್ ಮಾಡಲಿ.  ನಾನು ಕಾಂಗ್ರೆಸ್ ಮುಖಂಡನಾಗಿ ಪ್ರತಿಭಟನೆಗೆ ಬಂದಿಲ್ಲ. ಮುಸ್ಲಿಂ ಮುಖಂಡನಾಗಿ ಪ್ರತಿಭಟನೆಗೆ ಬಂದಿದ್ದೇನೆ.

ಬಿಜೆಪಿ ಸರ್ಕಾರದಲ್ಲಿ ಗೋಲಿಬಾರ್ ಸಾಮಾನ್ಯ. ಗೋಲಿಬಾರ್ ಮಾಡುವುದಾದರೆ ಮಾಡಲಿ. ನಾವು ಎದೆಗುಂದುವುದಿಲ್ಲ. ದೇಶ ನಮ್ಮದು; ನಾವೂ ಈ ದೇಶದ ಪ್ರಜೆಗಳು ಎಂದರು.

Facebook Comments