ಜಾರ್ಖಂಡ್ ನಾಲ್ವರು ಶಾಸಕರು ಬಿಜೆಪಿ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

ರಾಂಚಿ, ಅ.23 (ಪಿಟಿಐ)- ಜಾಜಾರ್ಖಂಡ್‍ನ ವಿರೋಧ ಪಕ್ಷದ ನಾಲ್ವರು ಶಾಸಕರು ಇಂದು ಆಡಳಿತರೂಢ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‍ನ ಇಬ್ಬರು, ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ)ನ ಒಬ್ಬರು ಹಾಗೂ ಪಕ್ಷೇತರ ಶಾಸಕ ಬಿಜೆಪಿಗೆ ಸೇರಿದ್ದಾರೆ.

ಕಾಂಗ್ರೆಸ್‍ನ ಸುಖದೇವೋ ಭಗತ್ ಮತ್ತು ಮನೋಜ್ ಯಾದವ್, ಜೆಎಂಎಂನ ಕುನಾಲ್ ಸಾರಾಂಗಿ ಹಾಗೂ ಪಕ್ಷೇತರ ಶಾಸಕ ಭಾನು ಪ್ರತಾಪ್ ಸಾಹಿ, ರಾಂಚಿಯ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರಘುವರ್ ದಾಸ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿಯ ಮುಖಂಡ ಕಿಶೋರ್ ಯಾದವ್ ಮತ್ತು ಕೇಂದ್ರದ ಮಾಜಿ ಸಚಿವ ಜಯಂತ್ ಸಿನ್ಹಾ ಹಾಜರಿದ್ದರು.

Facebook Comments