ಶಾಸಕರಾದ ನಾಗೇಂದ್ರ ಹಾಗೂ ಶ್ರೀಮಂತ್‍ಕುಮಾರ್ ಸದನಕ್ಕೆ ಗೈರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.22- ಅನಾರೋಗ್ಯದಿಂದ ಬಳಲುತ್ತಿರುವ ಕಾಂಗ್ರೆಸ್ ಶಾಸಕರಾದ ನಾಗೇಂದ್ರ ಹಾಗೂ ಶ್ರೀಮಂತ್‍ಕುಮಾರ್ ಪಾಟೀಲ್ ಅವರು ಸದನಕ್ಕೆ ಗೈರು ಹಾಜರಾಗಿದ್ದರು.

ಇಂದು ಮುಂಬೈನ ಆಸ್ಪತ್ರೆಯೊಂದರಲ್ಲಿ ಶ್ರೀಮಂತ್‍ಪಾಟೀಲ್ ಅವರಿಗೆ ಹೃದಯ ಸಂಬಂಧಿ ಕಾಯಿಲೆಗೆ ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ನಾಗೇಂದ್ರ ಅವರು ಕೂಡ ಚಿಕಿತ್ಸೆ ಮುಂದುವರೆದಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗುವವರೆಗೂ ತಡವಾಗಲಿದೆ ಎಂದು ಹೇಳಲಾಗುತ್ತಿದೆ.

ಮೈತ್ರಿ ಸರ್ಕಾರ ಇಂದು ಸದನದಲ್ಲಿ ವಿಶ್ವಾಸ ಮತ ಯಾಚನೆ ಮತದಾನ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಈ ಇಬ್ಬರ ಗೈರಿನಿಂದ ಕಾಂಗ್ರೆಸ್‍ನ ಬಲ ಕುಸಿಯಲಿದೆ.

Facebook Comments

Sri Raghav

Admin