ಬೆಂಗಳೂರಲ್ಲಿ ಇಂದಿನಿಂದ ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಸಂಚಾರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಏ.25- ಮೊಬೈಲ್ ಫೀವರ್ ಕ್ಲಿನಿಕ್ ನಗರದಲ್ಲಿ ಇಂದಿನಿಂದ ಪ್ರಾರಂಭವಾಗಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬೆಳಗ್ಗೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಉದ್ಘಾಟಿಸಿದರು.

ಈಗಾಗಲೇ ನಗರದಲ್ಲಿ 10 ಸ್ಥಳಗಳಲ್ಲಿ ಫೀವರ್ ಕ್ಲಿನಿಕ್‍ಗಳನ್ನು ತೆರೆಯಲಾಗಿದೆ. ಇಲ್ಲಿಗೆ ಸಾರ್ವಜನಿಕರು ಆಗಮಿಸಿ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಇನ್ನೂ ಹೆಚ್ಚು ಜನರಿಗೆ ಕೊರೊನಾ ಸೋಂಕು ಪರೀಕ್ಷೆ ಮಾಡಿಸಲು ಸಂಚಾರಿ ಫೀವರ್ ಕ್ಲಿನಿಕ್ ಚಾಲನೆಗೆ ತರಲಾಗಿದೆ. ಸದ್ಯಕ್ಕೆ ಇಂದಿನಿಂದ ಇದೊಂದು ಬಸ್ ನಗರಾದ್ಯಂತ ಸಂಚರಿಸಲಿದೆ ಎಂದು ತಿಳಿಸಿದರು.ಈ ಬಸ್‍ನಲ್ಲಿ ವೈದ್ಯಾಧಿಕಾರಿಗಳು, ನರ್ಸ್‍ಗಳಿಗೆ ಪ್ರತ್ಯೇಕವಾಗಿ ಟೇಬಲ್ ವ್ಯವಸ್ಥೆ ಕಲ್ಪಿಸಲಾಗಿದೆ.

ರೋಗಿಗಳು ಕುಳಿತುಕೊಳ್ಳಲು ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಕೆಲವು ಔಷಧಿಗಳನ್ನು ಇಡಲು ಬಾಕ್ಸ್‍ಗಳನ್ನು ಇಡಲಾಗಿದೆ. ಜತೆಗೆ ಸಾಬೂನು ಆಯಿಲ್, ಸ್ಯಾನಿಟೈಸರ್, ಮಾಸ್ಕ್‍ಗಳನ್ನು ಇಡಲಾಗಿದೆ. ಕೈ ತೊಳೆಯಲು ಪ್ರತ್ಯೇಕವಾಗಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ಬಸ್ ಬಹಳ ಅನುಕೂಲವಾಗಿದೆ ಎಂದು ಅಭಿರಾಂ ತಿಳಿಸಿದರು.

Facebook Comments

Sri Raghav

Admin