ಮೋದಿ ಒಂದೇ ಮಾತಿಗೆ ಆನ್ ಆಯ್ತು ಲಕ್ಷಾಂತರ ಮೊಬೈಲ್ ಫ್ಲಾಶ್ ಲೈಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ, ಮೇ 3- ಕಾಂಗ್ರೆಸ್ ಆಡಳಿತದಿಂದ ಕಂಗೆಟ್ಟಿರುವ ರಾಜಸ್ತಾನದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಬಹುಮತ ಲಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿನ್ನೆ ಜೈಪುರನಲ್ಲಿ ಭರ್ಜರಿ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ ಮೋದಿ ಇಂದು ಬದೌನ್ ಸಿಖರ್ ಮತ್ತು ಬಿಕೆನೇರ್‍ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ಬಿಜೆಪಿ ಪರ ಮತ ಚಲಾಯಿಸುವಂತೆ ಮನವಿ ಮಾಡಿದರು.

ಇದಕ್ಕೂ ಮುನ್ನ ನಿನ್ನೆ ರಾತ್ರಿ ಜೈಪುರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ತಮಗೆ ಜನರಿಂದ ಲಭಿಸಿದ ಭಾರೀ ಬೆಂಬಲದ ವಿಡಿಯೋ ತುಣಕನ್ನು ಟ್ವಿಟ್‍ರನಲ್ಲಿ ಪೋಸ್ಟ್ ಮಾಡಿದ್ದಾರೆ.

ತಮ್ಮ ಭಾಷಣದ ವೇಳೆ ಲಕ್ಷಾಂತರ ಜನರು ತಮ್ಮ ಮೊಬೈಲ್‍ ಫೋನ್‍ಗಳ ಫ್ಲಾಶ್ ಲೈಟ್‍ಗಳನ್ನು ಪ್ರದರ್ಶಿಸಿ ಬಿಜೆಪಿಗೆ ಭಾರೀ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ವಿಡಿಯೋ ಕ್ಲಿಪ್ ಮೂಲಕ ಮೋದಿ ತಿಳಿಸಿದ್ದಾರೆ.

ರಾಜಸ್ತಾನದ ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸುವುದರಲ್ಲಿ ಸಂಶಯವೇ ಇಲ್ಲ ಇದಕ್ಕೆ ತಮಗೆ ಮತ್ತು ಪಕ್ಷಕ್ಕೆ ದೊರೆತಿರುವ ಬೆಂಬಲವೇ ಸಾಕ್ಷಿ ಎಂದು ಪ್ರಧಾನಿ ಟ್ವಿಟ್ ಮಾಡಿದ್ದಾರೆ. ರಾಜಸ್ತಾನ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಪ್ರತಿಷ್ಠೆಯ ಕಣವಾಗಿದ್ದು ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಈ ರಾಜ್ಯದಲ್ಲಿ ಚುನಾವಣಾ ರ್ಯಾಲಿಗಳನ್ನು ನಡೆಸಿದ್ದಾರೆ.

Facebook Comments

Sri Raghav

Admin