ಬಿಎಂಟಿಸಿ ಬಸ್‍ಗಳಲ್ಲಿ ಮೊಬೈಲ್ ಲೌಡ್‍ಸ್ಪೀಕರ್ ನಿರ್ಬಂಧ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.20-ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಮೊಬೈಲ್ ಲೌಡ್‍ಸ್ಪೀಕರ್ ಬಳಕೆಗೆ ಬಿಎಂಟಿಸಿ ನಿರ್ಬಂಧ ಹೇರಿದೆ.ಬಿಎಂಟಿಸಿಯ ಬಸ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮೊಬೈಲ್ ಲೌಡ್‍ಸ್ಪೀಕರ್‍ಗಳಲ್ಲಿ ಹಾಡುಗಳನ್ನು ಹಾಕುವುದನ್ನು ನಿರ್ಬಂಧಿಸಲಾಗಿದೆ.

ಈ ಸಂಬಂಧ ಬಿಎಂಟಿಸಿ ಸುತ್ತೋಲೆ ಹೊರಡಿಸಿದ್ದು, ಸಂಸ್ಥೆಯ ಬಸ್‍ಗಳಲ್ಲಿ ಮೊಬೈಲ್ ಲೌಡ್‍ಸ್ಪೀಕರ್ ಬಳಕೆಯಿಂದ ಪ್ರಯಾಣಿಕರಿಗೆ ತೊಂದರೆಯಾಗುವುದಲ್ಲದೆ, ಶಬ್ಧ ಮಾಲಿನ್ಯವೂ ಉಂಟಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ಬಸ್‍ಗಳಲ್ಲೂ ಲೌಡ್‍ಸ್ಫೀಕರ್ ಬಳಕೆಯನ್ನು ನಿರ್ಬಂಧಿಸಲಾಗಿದೆ.

ಈ ಸಂಬಂಧ ಬಸ್‍ಗಳಲ್ಲಿ ಪ್ರಯಾಣಿಕರಿಗೆ ಕರ್ತವ್ಯ ನಿರತ ಚಾಲನಾ ಸಿಬ್ಬಂದಿ ತಿಳುವಳಿಕೆ ನೀಡಬೇಕು ಹಾಗೂ ಪ್ರಯಾಣಿಕರ ಗಮನಕ್ಕೆ ಬರುವಂತೆ ಬಸ್‍ಗಳಲ್ಲಿ ಮಾಹಿತಿಯನ್ನು ಪ್ರದರ್ಶಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಪ್ರತಿದಿನ 6203 ಅನುಸೂಚಿಗಳಿಂದ 69,721 ಸುತ್ತುವಳಿಗಳ ಮೂಲಕ ಬಸ್ ಸೇವೆಯನ್ನು ಬಿಎಂಟಿಸಿ ಒದಗಿಸುತ್ತಿದ್ದು, ಸುಮಾರು 35.77 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.

Facebook Comments

Sri Raghav

Admin