BREAKING : ಕೊನೆಗೂ ಕಿಲ್ಲರ್ ಕೊರೋನಾಗೆ ಲಸಿಕೆ ಸಿದ್ದಪಡಿಸಿದ ಅಮೆರಿಕ..?!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಮೇ 19-ವಿಶ್ವದಲ್ಲೇ ಅತಿ ಹೆಚ್ಚು ಸಾವು ಮತ್ತು ಸೋಂಕಿಗೆ ಕಾರಣವಾಗಿರುವ ಅಮೆರಿಕದಲ್ಲಿ ಕಿಲ್ಲರ್‍ಕೊರೊನಾ ನಿಗ್ರಹಕ್ಕಾಗಿ ವಿಜ್ಞಾನಿಗಳು ಮತ್ತು ಸಂಶೋಧಕರು ಔಷಧಿ ಅಭಿವೃದ್ದಿಗೊಳಿಸುವಲ್ಲಿ ನಿರಂತರ ಯತ್ನಗಳನ್ನು ಮುಂದುವರಿಸಿದ್ದಾರೆ.

ಅಮೆರಿಕದಲ್ಲಿ ಸಂಶೋಧನೆ ಮಾಡಲಾಗಿರುವ ಹೊಸ ಲಸಿಕೆಯೊಂದನ್ನು ಇದೇ ಮೊದಲ ಬಾರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದು ರೋಗಿಗಳಿಗೆ ಅತ್ಯಂತ ಸುರಕ್ಷಿತ ಮತ್ತು ಹೆಮ್ಮಾರಿ ನಿಗ್ರಹದಲ್ಲಿ ತುಂಬಾ ಪರಿಣಾಮಕಾರಿ ಎಂಬುದು ದೃಢಪಟ್ಟಿದೆ.

ಅಲ್ಲದೇಇದು ಸೋಂಕು ಪೀಡಿತರಲ್ಲಿ ರೋಗ ಪ್ರತಿರೋಧಕ ಶಕ್ತಿಯನ್ನು ಸಮರ್ಥವಾಗಿ ಹೆಚ್ಚಿಸಿ ವೈರಾಣು ನಿಗ್ರಹಿಸುತ್ತದೆ ಎಂಬುದು ಪ್ರಯೋಗದಿಂದ ದೃಢಪಟ್ಟಿದೆ. ಈ ಹೊಸ ಲಸಿಕೆಯು ಕೋವಿಡ್-19 ವೈರಸ್ ವಿಷವ್ಯೂಹದಿಂದ ಹೊರಬರಲು ಭರವಸೆಯ ಹೊಸ ಆಶಾಕಿರಣ ಎನಿಸಿದೆ.

ಮಾರ್ಚ್ ತಿಂಗಳಿನಿಂದ ಈ ಲಸಿಕೆ ಬಗ್ಗೆ ನಿರಂತರ ಸಂಶೋಧನೆ ನಡೆದಿದೆ. ಎಂಟು ಜನರ ಮೇಲೆ ಇದನ್ನು ಪ್ರಯೋಗಿಸಲಾಗಿದ್ದು, ಫಲಿತಾಂಶ ಆಶಾದಾಯಕವಾಗಿದೆ ಎಂದು ಅಮೆರಿಕದ ಮೊಡೆರ್ನಾ ಸಂಶೋಧನಾ ಸಂಸ್ಥೆಯ ಮುಖ್ಯ ವೈದ್ಯಕೀಯ ಅಧಿಕಾರಿ ಟಲ್‍ಜಾಕ್ಸ್ ಹೇಳಿದ್ದಾರೆ.

ಕೆಲವು ಹಂತಗಳಲ್ಲಿ ನಿಗದಿ ಪ್ರಮಾಣದಲ್ಲಿ ರೋಗಿಗಳ ಮೇಲೆ ಈ ಪರೀಕ್ಷೆ ನಡೆಸಲಾಗಿದ್ದು, ಅವರ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ ಕಂಡು ಬಂದಿದೆ ಎಂದು ಜಾಕ್ಸ್ ತಿಳಿಸಿದ್ದಾರೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊನ್ನೆಯಷ್ಟೇ ನಮ್ಮ ವಿಜ್ಞಾನಿಗಳು ಕೊರೊನಾ ನಿರ್ಮೂಲನೆ ಲಸಿಕೆಯ ಸಂಶೋಧನೆಯಲ್ಲಿಅಂತಿಮ ಹಂತದಲ್ಲಿದ್ದಾರೆ ಎಂದು ತಿಳಿಸಿದ್ದರು.

# ಸೂಪರ್ ಪವರ್ ದೇಶದಲ್ಲಿ ಮುಂದುವರಿದ ಕಿಲ್ಲರ್‍ಆರ್ಭಟ :
ಈ ಮಧ್ಯೆ, ಕಿಲ್ಲರ್‍ಕೊರೊನಾ ವೈರಸ್ ದಾಳಿಯಿಂದ ತತ್ತರಿಸುತ್ತಿರುವಅಮೆರಿಕದಲ್ಲಿಮೃತರ ಸಂಖ್ಯೆ 92,000ದಾಟಿದೆ.ಇನ್ನೆರಡು ದಿನಗಳಲ್ಲಿಒಂದು ಲಕ್ಷ ಮಂದಿ ಅಸುನೀಗುವ ಆತಂಕವಿದೆ. ಮಹಾಶಕ್ತಿಶಾಲಿ ರಾಷ್ಟ್ರದಲ್ಲಿ ಈವರೆಗೆ 15,50,294ಮಂದಿ ಸಾಂಕ್ರಾಮಿಕ ರೋಗ ಪೀಡಿತರಾಗಿದ್ಧಾರೆ.

ಇವರಲ್ಲಿ 16,869 ಮಂದಿಯ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ನ್ಯೂಯಾರ್ಕ್, ನ್ಯೂ ಜೆರ್ಸಿ, ಇಲಿನೋಯ್ಸ್, ಮಸ್ಸಾಚುಸೆಟ್ಸ್, ಕ್ಯಾಲಿಫೆÇೀರ್ನಿಯಾ ನಗರಗಳಲ್ಲಿ ಅತಿ ಹೆಚ್ಚು ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗಿದೆ.

Facebook Comments

Sri Raghav

Admin