ನೆಹರು ಕುಟುಂಬದ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi--201
ನವದೆಹಲಿ, ಆ.21-ನೆಹರು ಕುಟುಂಬದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಕೇವಲ ಒಂದೇ ಒಂದು ಕುಟುಂಬವನ್ನು ಬಿಂಬಿಸಲು, ಸ್ವಾತಂತ್ರ್ಯ ಹೋರಾಟಕ್ಕೆ ಅಮೂಲ್ಯ ಕೊಡುಗೆ ನೀಡಿದ ರಾಷ್ಟ್ರನಾಯಕರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ್ದಾರೆ. ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರು ಸ್ಫಾಪಿಸಿದ್ದ ಭಾರತದ ಪ್ರಪ್ರಥಮ ಸ್ವಾಯತ್ತ(ಸ್ವತಂತ್ರ) ಆಡಳಿತವಾದ ಆಜಾದ್ ಹಿಂದ್ ಸರ್ಕಾರ ಸ್ಥಾಪನೆಯ ದಿನದ (21ನೇ ಅಕ್ಟೋಬರ್ 1943) 75ನೇ ವಾರ್ಷಿಕೋತ್ಸವದ ಅಂಗವಾಗಿ ನವದೆಹಲಿಯ ಕೆಂಪುಕೋಟಿ ಮೇಲೆ ಇಂದು ತ್ರಿವರ್ಣ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದ ಸರ್ದಾರ್ ವಲ್ಲಭಭಾಯಿ ಪಟೇಟ್, ಡಾ. ಬಿ.ಆರ್.ಅಂಬೇಡ್ಕರ್, ನೇತಾಜಿ ಸುಭಾಷ್‍ಚಂದ್ರ ಬೋಸ್ ಮೊದಲಾದ ನಾಯಕರನ್ನು ಮರೆತು ಒಂದೇ ಒಂದು ಕುಟುಂಬವನ್ನು ಮಾತ್ರ ಪುರಸ್ಕರಿಸುತ್ತಿವೆ ಎಂದು ನೆಹರು ಮತ್ತು ಗಾಂಧಿ ಕುಟುಂಬದ ವಿರುದ್ಧ ಮೋದಿ ಹರಿಹಾಯ್ದರು.ನೇತಾಜಿ ಅವರ ಪ್ರಸಿದ್ಧ ಅಜಾದ್ ಹಿಂದ್ ಫೌಜ್‍ನ ಕ್ಯಾಪ್ ಧರಿಸಿದ್ದ ಮೋದಿ, ನಮ್ಮ ಸರ್ಕಾರ ಇಂಥ ಏಕಪಕ್ಷೀಯ ವರ್ತನೆಗಳಿಗೆ ಬದಲಾವಣೆ ತಂದಿದೆ. ದೇಶಕ್ಕೆ ಸೇವೆ ಸಲ್ಲಿಸಿದವರನ್ನು ಬಿಜೆಪಿ ಪಕ್ಷಾತೀತವಾಗಿ ಸ್ಮರಿಸುತ್ತಿದೆ.

ರಾಷ್ಟ್ರಕ್ಕೆ ಕೊಡುಗೆ ನೀಡಿದ್ದವರನ್ನು ಕಾಂಗ್ರೆಸ್ ಹಲವು ದಶಕಗಳ ಕಾಲ ಕಡೆಗಣಿಸಿತ್ತು. ಆಂತಹ ಮಹಾನ್ ವ್ಯಕ್ತಿಗಳ ಸೇವೆ ಮತ್ತು ತ್ಯಾಗಗಳನ್ನು ನಮ್ಮ ಸರ್ಕಾರ ಸ್ಮರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ನೆಹರು ಮತ್ತು ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಪಟೇಲ್, ಅಂಬೇಡ್ಕರ್, ಬೋಸ್ ಮೊದಲಾದ ಮಹಾ ನಾಯಕರನ್ನು ಮರೆತ್ತಿತ್ತು. ಆದರೆ ಬಿಜೆಪಿ ರಾಷ್ಟ್ರ ನಿರ್ಮಾಣಕ್ಕೆ ಕಾರಣದಾದ ಎಲ್ಲರನ್ನೂ ಸ್ಮರಿಸುತ್ತಿದೆ. ಈ ಹಿನ್ನೆಲೆಯಲ್ಲಿ ನೇತಾಜ ಅವರು 75 ವರ್ಷಗಳ ಹಿಂದೆ ಸ್ಥಾಪಿಸಿದ್ದ ಆಜಾದ್ ಹಿಂದ್ ಸರ್ಕಾರ ಸ್ಥಾಪನೆ ದಿನವನ್ನು ಇಂದು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮೋದಿ ಅಜಾದ್ ಹಿಂದ್ ಫೌಜ್ ಮ್ಯೂಸಿಯಂಗೆ ಶಿಲಾನ್ಯಾಸ ಸಹ ನೆರವೇರಿಸಿದರು.

Facebook Comments