ಪರಿಸರ ಸಂರಕ್ಷಣೆಯಲ್ಲಿ ಭಾರತ ಚಾಂಪಿಯನ್ : ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ಗಾಂಧಿನಗರ (ಗುಜರಾತ್), ಫೆ.17- ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಂಡಿರುವ ವಿಷಯದಲ್ಲಿ ಭಾರತ ಚಾಂಪಿಯನ್ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಷಿಯಸ್‍ಗಿಂತಲೂ ಕಡಿಮೆ ಮಟ್ಟದಲ್ಲಿ ನಿರ್ವಹಣೆ ಮಾಡಬೇಕೆಂಬ ಮಹತ್ವದ ಪ್ಯಾರಿಸ್ ಒಪ್ಪಂದಕ್ಕೆ ಬದ್ಧವಾಗಿ ಅದನ್ನು ಪಾಲಿಸುತ್ತಿರುವ ಕೆಲವೇ ಕೆಲವು ದೇಶಗಳಲ್ಲಿ ಭಾರತವೂ ಸಹ ಒಂದು ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಗುಜರಾತ್‍ನ ಗಾಂಧಿನಗರದಲ್ಲಿ ಇಂದು ನಡೆದ ವಲಸೆ ಜೀವ ಸಂಕುಲಗಳ ಸಂರಕ್ಷಣೆ ಕುರಿತ 13ನೆ ಸಮಾವೇಶವನ್ನು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸಂರಕ್ಷಣಾ ಮೌಲ್ಯಗಳು, ಸುಸ್ಥಿರ ಜೀವನ ಶೈಲಿ ಮತ್ತು ಹವಾಮಾನ /ವಾತಾವರಣಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸುರಕ್ಷತೆ ಇವುಗಳ ಆಧಾರದ ಮೇಲೆ ಪರಿಸರ ರಕ್ಷಣೆ ವಿಷಯದಲ್ಲಿ ಭಾರತವೂ ಚಾಂಪಿಯನ್ ಆಗಿದೆ ಎಂದು ಅವರು ಬಣ್ಣಿಸಿದರು.

ವಲಸೆ ಪಕ್ಷಗಳು ಸಂರಕ್ಷಣೆಗಾಗಿ ಸದ್ಯದಲ್ಲಿಯೇ ರಾಷ್ಟ್ರೀಯ ಕ್ರಿಯಾ ಯೋಜನೆಯೊಂದನ್ನು ರೂಪಿಸಲಾಗುತ್ತದೆ. ಏಷ್ಯಾದ ವಿವಿಧ ದೇಶಗಳಿಂದ ವಲಸೆ ಬರುವ ಪಕ್ಷಿಗಳಿಗೆ ರಕ್ಷಣೆ ನೀಡಲು ಮತ್ತು ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ವಿಶೇಷ ರೀತಿಯ ಗಮನ ಹರಿಸಲಾಗುತ್ತದೆ ಎಂದು ಹೇಳಿದರು.

Facebook Comments

Sri Raghav

Admin