“ರೈತ ಪರ ಧ್ವನಿ ಎತ್ತುವವರ ವಿರುದ್ಧ ಮೋದಿ ಸರ್ಕಾರ ದಾಳಿ ನಡೆಸುತ್ತಿದೆ”

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.4 (ಪಿಟಿಐ)- ದೇಶದಲ್ಲಿ ನಡೆಯುತ್ತಿರುವ ರೈತರ ಆಂದೋಲನದ ಪರ ಧ್ವನಿಗೂಡಿಸುವವರ ವಿರುದ್ಧ ಮೋದಿ ಸರ್ಕಾರ ದಾಳಿ ನಡೆಸಿದ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಸಂಸದ ರಾಹುಲ್ ಗಾಂಧಿ ಆರೋಪಿಸಿದರು.

ಕಾಂಗ್ರೆಸ್ ಮುಖಂಡ ರಾಹುಲ್ ಗುರುವಾರ ಮೂರು ಖ್ಯಾತ ಹಿಂದಿ ಪದ್ಯಗಳ ಸಾಲುಗಳನ್ನು ಬಳಸುವ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಲ್ಲದೆ, ರೈತರ ಪರವಾದವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಕಿಡಿಕಾರಿದರು.ಬಾಲಿವುಡ್ ನಟಿ ತಾಪ್ಸಿ ಪನ್ನು, ಚಿತ್ರನಿರ್ಮಾಪಕ ಅನುರಾಗ್ ಕಶ್ಯಪ್ ಮತ್ತು ಇತರರ ಮನೆ ಹಾಗೂ ಕಚೇರಿಗಳ ಮೇಲೆ ಇತ್ತೀಚೆಗೆ ಆದಾಯ ತೆರಿಗೆ ದಾಳಿ ನಡೆಸಿದೆ. ಇದು ಕೇಂದ್ರ ಸರ್ಕಾರದ ಕುತಂತ್ರದ ಭಾಗವಾಗಿದೆ ಎಂದರು.

ರಾಹುಲ್ ತಮ್ಮ ಟ್ವೀಟ್‍ನಲ್ಲಿ ಮೋದಿ ರೈಡ್ಸ್ ಪ್ರೊ ಫಾರ್ಮರ್ಸ್ ಹ್ಯಾಶ್‍ಟ್ಯಾಗ್ ಹಾಕುವ ಮೂಲಕ ಸರ್ಕಾರವನ್ನು ಕೆದಕುವ ಕೆಲಸ ಮಾಡಿದರು. ಹಿಂದಿ ಭಾಷೆಯ ಮೂರು ಪ್ರಸಿದ್ಧ ವೈಶಿಷ್ಟ್ಯಗಳಾದ ಉಂಗುಲಿಯೋಂಪೆ ನಚಾನ, ಭೀಗಿ ಬಿಲ್ಲಿ ಬನ್ನಾ ಮತ್ತು ಖಿಸಿಯಾನಿ ಬಿಲ್ಲಿ ಕಂಬಾ ನೋಚೆ ಎಂಬುದು ಪ್ರಸ್ತುತ ಸಂದರ್ಭದಲ್ಲಿ ಮೋದಿ ಅವರಿಗೆ ಇದನ್ನು ನಂಬುತ್ತಾರೆ ಎಂದು ತಿಳಿಸಿದರು.

Facebook Comments

Sri Raghav

Admin