ಅಂಡಮಾನ್‍ನಲ್ಲಿ ಪ್ರಥಮ ಸಮುದ್ರದಾಳದ ಆಫ್ಟಿಕಲ್ ಪೈಬರ್ ಕೇಬಲ್ ಯೋಜನೆಗೆ ಪ್ರಧಾನಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.10-ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗಾಗಿ ಪ್ರಪ್ರಥಮ ಸಮುದ್ರದಾಳದ ಆಫ್ಟಿಕಲ್ ಪೈಬರ್ ಕೇಬಲ್ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.

ಈ ಮಹತ್ವದ ಯೋಜನೆಯ ದೇಶದ ಇತರ ಮಹಾನಗರಗಳಲ್ಲಿ ಲಭ್ಯವಿರುವ ಸೇವೆಗಳಂತೆ ಕೇಂದ್ರಾಡಳಿತ ಪ್ರದೇಶದಲ್ಲಿಯೂ ಹೈ ಸ್ಪೀಡ್ ಬ್ರಾಡ್‍ಬಾಂಡ್ ಸಂಪರ್ಕಗಳನ್ನು ಒದಗಿಸಲಿದೆ.

ಚೆನ್ನೈ-ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ (ಕ್ಯಾನಿ) ನಡುವೆ ಸಂಪರ್ಕ ಕಲ್ಪಿಸುವ 2,312 ಕಿ.ಮೀ. ಮಾರ್ಗದ ಸಬ್‍ಮರೀನ್ ಆಪ್ಟಿಕಲ್ ಪೈಬರ್ ಕೇಬಲ್ ಯೋಜನೆಗೆ 2018ರ ಡಿಸೆಂಬರ್ 30ರಂದು ಶಿಲಾನ್ಯಾಸ ನೆರವೇರಿಸಿದ್ದರು.

ಈ ಮಹತ್ವದ ಯೋಜನೆಯ ಉದ್ಭಾಟನೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ತಮಿಳುನಾಡಿನ ಚೆನ್ನೈನಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್‍ಬ್ಲೇರ್‍ಗೆ., ಪೋರ್ಟ್‍ಬ್ಲೇರ್‍ನಿಂದ ಲಿಟಲ್ ಅಂಡಮಾನ್‍ಗೆ ಹಾಗೂ ಪೋರ್ಟ್‍ಬ್ಲೇರ್‍ನಿಂದ ಸ್ವರಾಜ್ ದ್ವೀಪದವರೆಗೆ ಈ ಸೇವೆ ಇಂದಿನಿಂದ ದೊಡ್ಡಮಟ್ಟದಲ್ಲಿ ಆರಂಭವಾಗಿದೆ ಎಂದು ತಿಳಿಸಿದರು.

Facebook Comments

Sri Raghav

Admin