ಮೋದಿ, ಕೆಸಿಆರ್, ಓವೈಸಿ ಎಲ್ಲರೂ ಒಂದೇ : ರಾಹುಲ್ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

Rahulನವದೆಹಲಿ, ಡಿ.3-ಪ್ರಧಾನಿ ನರೇಂದ್ರ ಮೋದಿ, ಟಿಆರ್‍ಎಸ್ ನಾಯಕ ಕೆ.ಚಂದ್ರಶೇಖರ ರಾವ್ ಮತ್ತು ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ ಇವರೆಲ್ಲರೂ ಒಂದೇ ಎಂದು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ, ಇವರಿಂದ ಮೋಸ ಹೋಗದಂತೆ ತೆಲಂಗಾಣ ರಾಜ್ಯದ ಜನರಿಗೆ ಸಲಹೆ ಮಾಡಿದ್ದಾರೆ.

ತೆಲಂಗಾಣ ರಾಷ್ಟ್ರೀಯ ಸಮಿತಿಯು ಬಿಜೆಪಿಯ ಬಿ-ತಂಡ. ಅದರ ಮುಖ್ಯಸ್ಥ ಕೆ.ಚಂದಶೇಖರ ರಾವ್ ಪ್ರಧಾನಿ ಮೋದಿ ಅವರ ತೆಲಂಗಾಣ ರಬ್ಬರ್ ಸ್ಟಾಂಪ್‍ನಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಟೀಕಿಸಿದರು.  ಇನ್ನು ಒವೈಸಿ ಅವರ ನೇತೃತ್ವದ ಎಐಎಂಐಎಂ ಬಿಜೆಪಿಯ ಸಿ-ತಂಡ. ಅದು ಬಿಜೆಪಿ/ಕೆಸಿಆರ್ ವಿರುದ್ಧದ ಮತಗಳನ್ನು ಒಡೆಯುವಲ್ಲಿ ಪಾತ್ರ ವಹಿಸುತ್ತದೆ ಎಂದು ರಾಹುಲ್ ಟ್ವೀಟರ್‍ನಲ್ಲಿ ಟೀಕಿಸಿದ್ದಾರೆ. ಈ ಮೂವರೂ ಒಂದೇ. ಇವರು ಎರಡು ನಾಲಿಗೆ ಹೊಂದಿರುವ ನಾಯಕರು. ಇವರ ಬಣ್ಣದ ಮಾತುಗಳಿಗೆ ಮರಳಾಗಿ ಮೋಸಹೋಗಬೇಡಿ ಎಂದು ಜನತೆಗೆ ರಾಹುಲ್ ಕರೆ ನೀಡಿದರು.

Facebook Comments