ಮತ ಚಲಾಯಿಸಿದ ಮೋದಿ ಮಾತೆ ಹೀರಾ ಬೆನ್ ..!

ಈ ಸುದ್ದಿಯನ್ನು ಶೇರ್ ಮಾಡಿ

ಅಹಮದಾಬಾದ್, ಏ.23- ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ (95) ಅವರು ಇಂದು ಮೂರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ ಗಮನಸೆಳೆದರು.

ಗುಜರಾತ್‍ನ ಗಾಂಧಿನಗರ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಬೆಳಗ್ಗೆ ತಮ್ಮ ಹಕ್ಕು ಚಲಾಯಿಸಿದರು. ಗಾಂಧಿನಗರದಿಂದ 10 ಕಿ.ಮೀ. ದೂರದಲ್ಲಿರುವ ರೈಸಾನ್ ಗ್ರಾಮದಲ್ಲಿ ಪ್ರಧಾನಿ ಸಹೋದರ ಪಂಕಜ್ ಮೋದಿ ಅವರೊಂದಿಗೆ ಹೀರಾ ಬೆನ್ ವಾಸವಾಗಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಮತ ಕೇಂದ್ರಕ್ಕೆ ಕುಟುಂಬದ ಸದಸ್ಯರೊಂದಿಗೆ ಆಗಮಿಸಿದ ಅವರು ಮತದಾನ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಅಹಮದಾಬಾದ್‍ನಲ್ಲಿ ಮತ ಚಲಾಯಿಸುವುದಕ್ಕೂ ಮುನ್ನ ತಮ್ಮ ತಾಯಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ನರೇಂದ್ರ ಮೋದಿ ದೇಶಕ್ಕೆ ಪ್ರಧಾನಿಯಾದರೂ ಮಾತೆಗೆ ಮುದ್ದಿನ ಮಗ. ಮನೆಗೆ ಬಂದ ಪುತ್ರನಿಗೆ ಹೀರಾ ಬೆನ್ ಅವರು ಸಿಹಿ ತಿನಿಸಿ ತೆಂಗಿನ ಕಾಯಿ ಮತ್ತು ಶಾಲು ನೀಡಿ ಚುನಾವಣೆಯಲ್ಲಿ ಜಯಶಾಲಿಯಾಗುವಂತೆ ಹರಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin