2ನೇ ಹಂತಗಳ ಚುನಾವಣೆ ನಂತರ ದೀದಿ ನಿದ್ದೆ ಮಾಡಿಲ್ಲ : ಮೋದಿ ಲೇವಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬುನಿಯಾದಪುರ(ಪ.ಬಂ), ಏ.20- ಲೋಕಸಭಾ ಚುನಾವಣೆಯ ಒಂದು ಮತ್ತು ಎರಡನೇ ಹಂತದ ಮತದಾನದ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಸೋಲಿನ ಭಯದಿಂದ ನಿದ್ದೆ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಬುನಿಯಾದಪುರನಲ್ಲಿ ಬೃಹತ್ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿ ಅವರು, ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಅಭಿವೃದ್ಧಿ ಕಾರ್ಯಗಳಿಗೆ ದೊಡ್ಡ ಅಡ್ಡಿಯಾಗಿರುವ ಸ್ಪೀಡ್ ಬ್ರೇಕರ್ ದೀದಿ ಮಾ, ಮತಿ ಮತ್ತು ಮನುಷ್ಯ್(ತಾಯಿ, ಭೂಮಿ ಮತ್ತು ಜನ) ಈ ಮೂರು ಹೆಸರುಗಳಿಂದ ಪಶ್ಚಿಮ ಬಂಗಾಳದ ಮುಗ್ಧ ಜನರನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಆರೋಪಿಸಿದರು.

ಟಿಎಂಸಿ ಪರ ಚುನಾವಣಾ ಪ್ರಚಾರ ನಡೆಸಲು ನೆರೆಹೊರೆ ದೇಶಗಳಿಂದ ಕೆಲವು ನಾಯಕರನ್ನು ಪಶ್ಚಿಮ ಬಂಗಾಳಕ್ಕೆ ಕರೆ ತಂದು ಮುಸ್ಲಿಂರನ್ನು ಓಲೈಸಲು ಕೀಳುಮಟ್ಟದ ರಾಜಕಾರಣ ಮಾಡಿದ್ದಾರೆ ಎಂದು ಕಿಡಿಕಾರಿದರು.

ಪಶ್ಚಿಮ ಬಂಗಾಳದಿಂದ ನಂತರ ಬಿಹಾರಕ್ಕೆ ತೆರಳಿ ಅಲ್ಲಿನ ಅರಾರಿಯಾದಲ್ಲಿ ಬೃಹತ್ ಚುನಾವಣಾ ಭಾಷಣ ಮಾಡಿದ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಚುನಾವಣೆಯಲ್ಲಿ ಎರಡು ಗುಂಪುಗಳಿವೆ ಒಂದು ಗುಂಪು ಓಟ್ ಭಕ್ತಿ(ಕಾಂಗ್ರೆಸ್) ಹಾಗೂ ಮತ್ತೊಂದು ಬಣ ದೇಶಭಕ್ತಿಯ (ಬಿಜೆಪಿ) ಧೋರಣೆ ಹೊಂದಿದೆ ಎಂದು ಸಮೀಕರಿಸಿದರು.

ನಮ್ಮವರು ಭಾರತ ಮಾತಾಕೀ ಜೈ ಎಂದು ಘೋಷಣೆಗಳನ್ನು ಮಾರ್ದನಿಸುತ್ತ ದೇಶಭಕ್ತಿ ಪ್ರದರ್ಶಿಸಿದರೆ ಇದನ್ನು ಸಹಿಸದ ಕೆಲವರು(ಕಾಂಗ್ರೆಸ್) ಭಾರತ ತೇರೆ ತುಕಡೆ ಹೊಂಗೇ ಎಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin