ಮೋದಿ-ಸೌದಿ ರಾಜಕುಮಾರ ದ್ವಿಪಕ್ಷೀಯ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

modiಬ್ಯುನಸ್ ಏರಿಸ್, ನ.30 (ಪಿಟಿಐ)- ಇಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾ ರಾಜಕುಮಾರ ಮಹಮದ್ ಬಿಲ್ ಸಲ್ಮಾನ್ ಅವರನ್ನು ಭೇಟಿ ಮಾಡಿದರು. ಇವರಿಬ್ಬರ ಭೇಟಿ ವೇಳೆ ಆರ್ಥಿಕ, ಸಾಂಸ್ಕøತಿಕ ಮತ್ತು ಇಂಧನ ಕ್ಷೇತ್ರಗಳಲ್ಲಿ ಮತ್ತಷ್ಟು ಬಾಂಧವ್ಯ ಬಲವರ್ಧನೆ ಮಾರ್ಗೋಪಾಯಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು.

ಉಭಯ ದೇಶಗಳ ನಡುವೆ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ಮತ್ತು ಆಹಾರ ಭದ್ರತೆ ವಿಷಯಗಳ ಕುರಿತು ಸಹ ಸಮಾಲೋಚನೆ ನಡೆಯಿತು.
ಸೌದಿ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಅಲ್ ಸೌದ್ ಅವರೊಂದಿಗೆ ನಡೆದ ಮಾತುಕತೆ ಫಲಪ್ರದವಾಗಿದೆ. ಭಾರತ-ಸೌದಿ ಅರೇಬಿಯಾ ಸಂಬಂಧಗಳ ಕುರಿತು ನಾವು ಬಹು ಆಯಾಮದ ಚರ್ಚೆಗಳನ್ನು ನಡೆಸಿದೆವು.

ಅಲ್ಲದೆ, ಆರ್ಥಿಕ, ಸಾಂಸ್ಕoತಿಕ ಮತ್ತು ಇಂಧನ ಕ್ಷೇತ್ರಗಳಲ್ಲಿ ಮತ್ತಷ್ಟು ಬಾಂಧವ್ಯ ಬಲವರ್ಧನೆ ಮಾರ್ಗೋಪಾಯಗಳ ಕುರಿತು ಸಹ ಸಮಾಲೋಚನೆ ನಡೆಯಿತು ಎಂದು ಪ್ರಧಾನಮಂತ್ರಿ ಟ್ವಿಟರ್‍ನಲ್ಲಿ ಬರೆದಿದ್ದಾರೆ. ಇದಾದ ನಂತರ ಪ್ರಧಾನಿ ಮೋದಿ ಅವರನ್ನು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೋ ಗುಟೆರ್ರಸ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

Facebook Comments