ಮೋದಿಯಿಂದ ಅಭಿವೃದ್ಧಿ ಯೋಜನೆಗಳಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುದುಚೇರಿ, ಫೆ.25 (ಪಿಟಿಐ)- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಇಲ್ಲಿಗೆ ಭೇಟಿ ಕೊಟ್ಟು ಪೂರ್ಣಗೊಂಡ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಲ್ಲದೆ ಬಂದರುಗಳು ಮತ್ತು ಹೆದ್ದಾರಿ ಕ್ಷೇತ್ರಗಳು ಸೇರಿದಂತೆ ಇತರ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ನಂತರ ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮೋದಿ ಮಾತನಾಡಿದರು.

ಇಂದು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಬದಲಾವಣೆಯ ಗಾಳಿ ಗೋಚರಿಸಿ, ಅಭಿವೃದ್ಧಿ ಹವಾ ಬೀಸುತ್ತಿದೆ. ಇಲ್ಲಿನ ಜನರು ಕಾಂಗ್ರೆಸ್ಸಿನ ದುರಾಡಳಿತದಿಂದ ಸ್ವಾತಂತ್ರ್ಯ ಬಯಸಿದ್ದರು. ಅದರ ಸಂಭ್ರಮವನ್ನು ಈಗ ಆಚರಿಸುತ್ತಿದ್ದಾರೆ ಎಂದರು. ಕಾಂಗ್ರೆಸ್ ನೇತೃತ್ವದ ವಿ. ನಾರಾಯಣಸ್ವಾಮಿ ಸರ್ಕಾರ ಅಧಿಕಾರ ಕಳೆದುಕೊಂಡ ನಂತರ ಮೊದಲ ಬಾರಿಗೆ ಭೇಟಿ ನೀಡಿದ ಪ್ರಧಾನಿ, ತಮ್ಮ ಮಾತುಗಳನ್ನು ಮುಂದುವರಿಸಿ ನಮ್ಮ ವಸಾಹತುಶಾಹಿ ಆಡಳಿತಗಾರರು ವಿಭಜನೆ ಆಡಳಿತ ನೀತಿ ಹೊಂದಿದ್ದರು.

ಕಾಂಗ್ರೆಸ್ ಪಕ್ಷ ವಿಭಜನೆ, ಸುಳ್ಳು ಹಾಗೂ ಒಡೆದಾಡುವ ಆಡಳಿತ ನೀತಿಯನ್ನು ಹೊಂದಿದೆ. ಕೆಲವೊಮ್ಮ ಅವರ ನಾಯಕರು ಪ್ರದೇಶ, ಪ್ರದೇಶಗಳ ವಿರುದ್ಧ ಹಾಗೂ ಸಮುದಾಯ ಸಮುದಾಯಗಳ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಹೈಕಮಾಂಡ್‍ಗೆ ಸೇವೆ ಮಾಡುವಲ್ಲಿ ನಿರತರಾಗಿದ್ದ ಪುದುಚೇರಿಗೆ 2016ರಲ್ಲಿ ಸರ್ಕಾರ ದೊರೆತ್ತಿತ್ತು. ಆದರೆ, ಅವರ ಆದ್ಯತೆಗಳು ವಿಭಿನ್ನವಾಗಿದ್ದವು ಎಂದರು.

Facebook Comments