ವಿಶ್ವಸಂಸ್ಥೆ ಕೇಂದ್ರ ಕಚೇರಿಗೆ ಭಾರತದ ಗಾಂಧಿ ಸೋಲಾರ್ ಪಾರ್ಕ್ ಉಡುಗೊರೆ

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಸೆ.20-ವಿಶ್ವಸಂಸ್ಥೆಗೆ ಭಾರತದ ಪ್ರಥಮ ಸಾಂಕೇತಿಕ ಉಡುಗೊರೆ ಲಭ್ಯವಾಗುತ್ತಿದ್ದು, ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಸಂಯುಕ್ತ ರಾಷ್ಟ್ರಗಳ ಕೇಂದ್ರ ಕಚೇರಿಯಲ್ಲಿ 50 ಮೆಗಾವ್ಯಾಟ್ ಸಾಮಥ್ರ್ಯದ ಗಾಂಧಿ ಸೋಲಾರ್ ಪಾರ್ಕ್ (ಸೌರ ಉದ್ಯಾನವನ) ಉದ್ಘಾಟಿಸುವರು.

ನವೀಕರಿಸಬಹುದಾದ ಇಂಧನ ಬಳಕೆಗೆ ಒತ್ತು ನೀಡಿ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಒತ್ತು ನೀಡಿ, ಅದನ್ನು ಅಕ್ಷರಶಃ ಆಚರಣೆ ತರುವ ಸಂಕೇತವಾಗಿ ಈ ಅರ್ಥಪೂರ್ಣ ಉಡುಗೊರೆ ನೀಡುತ್ತಿದೆ.

ಪರಿಸರ ಮಾಲಿನ್ಯ ದುಷ್ಪರಿಣಾಮಗಳು ಮತ್ತು ವಾತಾವರಣ ಬದಲಾವಣೆಯಿಂದ ಭೂಮಂಡಲದಲ್ಲಿ ಆಗುತ್ತಿರುವ ಅನಾಹುತಗಳ ಮೇಲೆ ಬೆಳಕು ಚೆಲ್ಲಲಿರುವ ಮಹತ್ವದ ಸಮಾವೇಶಕ್ಕೆ ಮುನ್ನವೇ ಭಾರತ ನ್ಯೂಯಾರ್ಕ್‍ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಚೇರಿಗೆ ಈ ಕೊಡುಗೆ ನೀಡುತ್ತಿದೆ.

ಜಗತ್ತಿನ ಯಾವ ದೇಶಗಳೂ ಕೂಡ ಈವರೆಗೆ ಯೂನೈಟೆಡ್ ನೇಷನ್‍ಗೆ ಈ ರೀತಿಯ ಕೊಡುಗೆ ನೀಡಿಲ್ಲ. ಹೀಗಾಗಿ ಈ ಉಡುಗೊರೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.ಈ ಸೋಲಾರ್ ಪಾರ್ಕ್ ಉದ್ಘಾಟನೆ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟ್ರೆರಸ್ ಸೇರಿದಂತೆ ಅನೇಕ ದೇಶಗಳ ಮುಖಂಡರು ಭಾಗವಹಿಸುವರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin