ಕಲ್ಲಂಗಡಿಯಲ್ಲಿ ಅರಳಿದ ಟ್ರಂಪ್-ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಫೆ. 24- ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್‍ಗೆ ಅಭೂತಪೂರ್ವ ಸ್ವಾಗತ ಕೋರಲು ಹಣ್ಣು ಹಾಗೂ ತರಕಾರಿ ಕಲಾವಿನ್ಯಾಸಕಾರ ಎಂ. ಎಲಾಂಚೆಜಿಯನ್ ಅವರು ವಿನೂತನ ರೀತಿಯ ಕಲಾಕೃತಿ ಯನ್ನು ಅರಳಿಸಿದ್ದಾರೆ. ವಿಶ್ವದ ಅದ್ಭುತಗಳಲ್ಲಿ ಒಂದೆನಿಸಿರುವ ತಾಜ್‍ಮಹಲ್‍ನ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಭಾವಚಿತ್ರವನ್ನು ಕಲ್ಲಂಗಡಿ ಹಣ್ಣಿನ ಮೇಲೆ ಅರಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಈ ಹಿಂದೆ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು ಭಾರತಕ್ಕೆ ಭೇಟಿ ನೀಡಿ ಮಮಲ್ಲಾಪುರಂಗೆ ಆಗಮಿಸಿದಾಗ ಅವರ ಫೋಟೋವನ್ನು 4 ಕೆಜಿ ಗಾತ್ರದ ಕಲ್ಲಂಗಡಿ ಮೇಲೆ ಅವರ ಫೋಟೋವನ್ನು ಅರಳಿಸಿದ್ದ ಎಲಾಂಚೆಜಿಯನ್ ಈ ಬಾರಿ 5 ಕೆಜಿ ಕಲ್ಲಂಗಡಿ ಹಣ್ಣನ್ನು ಬಳಸಿ ಟ್ರಂಪ್‍ರ ಫೋಟೋವನ್ನು ಅರಳಿಸುವ ಮೂಲಕ ಅಭೂತಪೂರ್ವ ಸ್ವಾಗತ ಕೋರಿದ್ದಾರೆ. ಎಂಜಿನಿಯರ್ ಪದವೀಧರ ನಾಗಿರುವ ಎಲಾಂಚೆಜಿಯನ್ ಹಣ್ಣು ಹಾಗೂ ತರಕಾರಿಗಳ ಮೇಲೆ ಗಣ್ಯರ ಭಾವಚಿತ್ರವನ್ನು ಮೂಡಿಸುವ ಕಲೆಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದು ಈ ಕಲೆಯ ಬಗ್ಗೆ ಆಸಕ್ತಿ ಇರುವವರಿಗೆ ತರಬೇತಿಯನ್ನು ನೀಡುತ್ತಿದ್ದಾನೆ.

ಎಲಾಂಚೆಜಿಯನ್ ಈ ಹಿಂದೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಮಾಬಾ, ಭಾರತದ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ನಟ ಎಂ.ಜಿ.ರಾಮಚಂದ್ರನ್‍ರ ಭಾವಚಿತ್ರಗಳನ್ನು ಹಣ್ಣುಗಳ ಮೇಲೆ ಬಿಂಬಿಸುವ ಮೂಲಕ ಗಮನ ಸೆಳೆದಿದ್ದರು.

Facebook Comments