ಸಿಂಗಪುರ್’ನಲ್ಲಿ ಮಹಾತ್ಮಾ ಗಾಂಧಿ ಸ್ಮರಣ ಫಲಕ ಅನಾವರಣ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಸಿಂಗಪುರ್, ಜೂ. 2-ಇಲ್ಲಿನ ಕ್ಲಿಫ್‍ಪೋರ್ಡ್‍ನಲ್ಲಿ ಮಹಾತ್ಮ ಗಾಂಧಿ ಚಿತಾಭಸ್ಮ ಸಮರ್ಪಿಸಿದ ಸ್ಥಳದಲ್ಲಿ ರಾಷ್ಟ್ರಪಿತನಿಗೆ ಶ್ರದ್ಧಾಂಜಲಿ ಸಲ್ಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಸಿಂಗಪುರ್ ಮಾಜಿ ಪ್ರಧಾನಿ ಗೋ ಚೋಕ್ ಟೊಂಗ್ ಇಂದು ಜಂಟಿಯಾಗಿ ಗಾಂಧಿ ಸ್ಮರಣ ಫಲಕ ಅನಾವರಣಗೊಳಿಸಿದರು.
ಇಂಡೋನೆಷ್ಯಾ ಮತ್ತು ಮಲೇಷ್ಯಾ ಪ್ರವಾಸದ ನಂತರ ಕೊನೆ ಹಂತವಾಗಿ ಸಿಂಗಪುರ್‍ಗೆ ಭೇಟಿ ನೀಡಿದ ಮೋದಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

PM Modi 01

1948ರಲ್ಲಿ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಸಿಂಗಪುರ್‍ನ ಕ್ಲಿಫ್‍ ಪೋರ್ಡ್‍ನ ಸಾಗರ ಪ್ರದೇಶದಲ್ಲಿ ತರ್ಪಣ ಮಾಡಲಾಗಿತ್ತು. ರಾಷ್ಟ್ರಪಿತನ ಗೌರವಾರ್ಥ ಈ ಸ್ಥಳದಲ್ಲಿ ಸ್ಮರಣ ಫಲಕವನ್ನು ಅನಾವರಣಗೊಳಿಸಲಾಗಿದೆ. ಬಾಪು ಅವರ ಸತ್ಯ ಮತ್ತು ಅಹಿಂಸೆ ಸಂದೇಶ ಇಂದಿಗೂ ಎಂದಿಂದಿಗೂ ಪ್ರಸ್ತುತ. ಅವರ ಸಂದೇಶಗಳು ವಿಶ್ವಮಾನ್ಯ. ಅವರ ಚಿಂತನೆ ಮತ್ತು ಆಲೋಚನೆಗಳು ಮನುಕುಲದ ಒಳತಿಗಾಗಿ ಕಾರ್ಯನಿರ್ವಹಿಸಲು ನಮಗೆಲ್ಲಾ ಸ್ಫೂರ್ತಿ-ಪ್ರೇರಣೆಯಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

PM Modi 04

PM Modi 03

Facebook Comments

Sri Raghav

Admin