ಕೊರೋನಾ ಲಸಿಕೆಯ 2ನೇ ಡೋಸ್ ಪಡೆದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.8-ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಎರಡನೆ ಡೋಸ್ ಕೊರೊನಾ ಲಸಿಕೆ ಪಡೆದರು. ಕಳೆದ ಮಾ.1 ರಂದು ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಮೊದಲ ಡೋಸ್ ಪಡೆದುಕೊಂಡಿದ್ದ ಅವರು ಇಂದು ಬೆಳಿಗ್ಗೆ ಎರಡನೆ ಡೋಸ್ ಪಡೆದುಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಕೊರೊನಾ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದರು.

ಕೊರೊನಾ ವಿರುದ್ಧ ಹೋರಾಡಬೇಕಾದರೆ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಬೇಕು. ನೀವು ಲಸಿಕೆ ಹಾಕಿಸಿಕೊಳ್ಳಲು ಅರ್ಹರಿದ್ದರೆ ಕೋವಿನ್ ವೆಬ್‍ಸೈಟ್‍ಗೆ ಲಾಗಿನ್ ಆಗಿ ಕೂಡಲೇ ಹಾಕಿಸಿಕೊಳ್ಳಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಟ್ವೀಟ್‍ನಲ್ಲಿ ಮೋದಿ ಲಸಿಕೆ ಹಾಕಿಸಿಕೊಳ್ಳುತ್ತಿರುವ ಚಿತ್ರವರನ್ನು ಶೇರ್ ಮಾಡಿದ್ದಾರೆ.

ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಮೋದಿ ಹಾಕಿಸಿಕೊಂಡಿದ್ದು ಪಾಂಡಿಚೇರಿಯ ಪಿ.ನಿವೇದಿತಾ ಹಾಗೂ ಪಂಜÁಬ್‍ನ ನಿಶಾ ಶರ್ಮ ಎಂಬ ಇಬ್ಬರು ನರ್ಸ್‍ಗಳು ಪ್ರಧಾನಿಗಳಿಗೆ ಲಸಿಕೆ ಹಾಕಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

Facebook Comments