ಮೊಹರಂ ಸಾಮೂಹಿಕ ಭೋಜನ ಮಾಡಿ 70ಕ್ಕೂ ಹೆಚ್ಚು ಮಂದಿ ಅಸ್ಪಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಸೆ.10- ಮೊಹರಂ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ಭೋಜನ ಕೂಟದಲ್ಲಿ ಊಟವನ್ನು ಮಾಡಿ 70ಕ್ಕೂ ಹೆಚ್ಚು ಮಂದಿ ಅಸ್ಪಸ್ಥರಾಗಿರುವ ಘಟನೆ ತಾಲೂಕಿನ ಮಂಚೇನಹಳ್ಳಿ ಹೋಬಳಿಯಲ್ಲಿ ಪೊತೇನಹಳ್ಳಿ ಗ್ರಾಮದಲ್ಲಿ ಜರುಗಿದೆ.

ತಾಲೂಕಿನ ಪೊತೇನಹಳ್ಳಿಯಲ್ಲಿ ಮೊಹರಂ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ದಾ ಭಕ್ತಿಯಿಂದ ಆಚರಣೆ ಮಾಡಿದ್ದಾರೆ ನಂತರ ಭೋಜನವನ್ನು ಮಾಡಿದ ಸ್ವಲ್ಪ ಸಮಯದಲ್ಲಿ ಒಬ್ಬೊಬ್ಬರಂತೆ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ, ಸುಮಾರು 70 ಕ್ಕೂ ಹೆಚ್ಚು ಮಂದಿ ಊಟವನ್ನು ಮಾಡಿದ್ದು ಎಲ್ಲರೂ ಅಸ್ವಸ್ಥರಾಗಿದ್ದಾರೆ ತಕ್ಷಣ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಪಡೆದುಕೊಂಡು ನಂತರ ಗುಣಮುಖರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಲೂಕು ಆಡಳಿತ ವೈದ್ಯಾಧಿಕಾರಿ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಉಪಯೋಗಿಸಿದ್ದ ಆಹಾರವನ್ನು ಪರೀಕ್ಷೆಗೊಳಪಡಿಸಿ ಕಾರಣವೇನೆಂದು ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ವೃತ್ತನಿರೀಕ್ಷಕ ವೈ.ಅಮರನಾರಾಯಣ್, ಎಸ್‍ಐಗಳಾದ ಮೋಹನ್, ಅವಿನಾಶ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Facebook Comments