ಕೋಟಿ ಗೆದ್ದು ಕರೋಡ್‍ಪತಿಯಾದ ಐಪಿಎಸ್‍ ಅಧಿಕಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ನ.18- ಬಾಲಿವುಡ್‍ನ ಬಿಗ್‍ಬಿ ಅಮಿತಾಬ್‍ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್‍ಪತಿಗೆ ಈಗ 12ರ ಸಂಭ್ರಮ. ಕಾರ್ಯಕ್ರಮ ಶುರುವಾದಾಗಿನಿಂದಲೂ ಕೋಟಿ ಗೆದ್ದ ವೀರರ ಸಂಖ್ಯೆಯ ಪಟ್ಟಿ ಹೆಚ್ಚಾಗಿದೆ. ಆದರೆ ಈ ಬಾರಿಯ ರಿಯಾಲ್ಟಿ ಶೋನಲ್ಲಿ ಇಬ್ಬರು ಮಹಿಳೆಯರು ಕೋಟಿ ಪ್ರಶ್ನೆಗೆ ಉತ್ತರಿಸಿ ಕರೋಡ್‍ಪತಿಗಳಾಗಿದ್ದಾರೆ.

ಕಳೆದ ರಾತ್ರಿ ಈ ಕಾರ್ಯಕ್ರಮದ ಹಾಟ್‍ಸೀಟ್‍ನಲ್ಲಿ ಕುಳಿತಿದ್ದ ಐಪಿಎಸ್ ಅಧಿಕಾರಿ ಮೋಹಿತಾಶರ್ಮಾ ಕೋಟಿ ಗೆಲ್ಲುವ ಮೂಲಕ ಸಂಭ್ರಮಿಸಿದರಾದರೂ 7 ಕೋಟಿ ಪ್ರಶ್ನೆಗೆ ಉತ್ತರಿಸಲು ಹಿಂಜರಿದರು. ಕೌನ್‍ಬನೇಗಾ ಕರೋಡ್‍ಪತಿಯ 12ನೇ ಸೀಸನ್‍ನಲ್ಲಿ ಈಗಾಗಲೇ ನವದೆಹಲಿಯ ನಾಜಿಯಾ ನಸಿಮ್ ಕೋಟ್ಯಾಧಿಪತಿಗಳಾಗಿದ್ದರೆ ಈಗ ಆ ಸಾಲಿಗೆ ಐಪಿಎಸ್ ಅಧಿಕಾರಿ ಮೋಹಿತಾಶರ್ಮಾ ಸೇರಿಕೊಂಡಿದ್ದಾರೆ.

ಮೊದಲ ದಿನವೇ 9 ಪ್ರಶ್ನೆಗಳಿಗೆ ಉತ್ತರಿಸಿದ್ದ ಮೋಹಿತಾಶರ್ಮಾ ಕೋಟಿ ಗೆಲ್ಲುವ ಭರವಸೆ ಮೂಡಿಸಿಕೊಂಡಿದ್ದರು. ಎರಡನೇ ದಿನವೂ ಉತ್ತಮವಾಗಿ ಆಟವಾಡಿದ ಅವರು ಕೋಟಿ ಪ್ರಶ್ನೆಗೆ ಉತ್ತರ ನೀಡಿ ಕೋಟ್ಯಾಧಿಪತಿಗಳಾದರೂ 7 ಕೋಟಿ ಪ್ರಶ್ನೆಯ ವೇಳೆಗೆ ಅವರಿಗಿದ್ದ ಎಲ್ಲಾ 3 ಲೈಫ್‍ಲೈನ್‍ಗಳು ಮುಗಿದಿದ್ದರಿಂದ ಅವರು ಆ ಸುತ್ತಿನಿಂದ ಹಿಂದೆ ಸರಿದು 1 ಕೋಟಿ ರೂ.ಗೆ ತೃಪ್ತಿಪಟ್ಟುಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಮೋಹಿತಾ ನನ್ನ ಪತಿ ಈ ಶೋಗೆ ಬರಲು ಪ್ರಯತ್ನಿಸುತ್ತಿದ್ದರಾದರೂ ಅವರಿಗೆ ಅವಕಾಶ ಸಿಕ್ಕಿರಲಿಲ್ಲ, ಆದರೆ ನನಗೆ ಅವಕಾಶ ಸಿಕ್ಕಿ ಕೋಟಿ ರೂಪಾಯಿ ಗೆಲ್ಲುವ ಮೂಲಕ ಅವರ ಆಸೆಯನ್ನು ಈಡೇರಿಸಿದ್ದೇನೆ ಎಂದು ಹೇಳಿದರು.

Facebook Comments