ನೀರಿನಲ್ಲಿ ಡ್ರಮ್‍ನಲ್ಲಿ ಮುಳುಗಿಸಿ ಹಸುಗೂಸನ್ನು ಕೊಂದ ತಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

ಭೋಪಾಲï, ಸೆ.20- ಮಕ್ಕಳು ಬೇಕೆಂದು ಹಂಬಲಿಸುವ ತಾಯಿಯಂದಿರು ನೂರಾರು ಗುಡಿ ಗೋಪುರಗಳನ್ನು ಸುತ್ತಿ ವ್ರತ ಮಾಡಿದರೆ, ಇಲ್ಲೊಬ್ಬ ಕ್ರೂರಿ ತಾಯಿ ತಾನು ಜನ್ಮ ನೀಡಿದ ಮಗುವನ್ನು ನೀರಿನ ಡ್ರಮ್‍ನಲ್ಲಿ ಮುಳುಗಿಸಿ ಕೊಲೆ ಮಾಡಿರುವ ವಿದ್ರಾವಕ ಘಟನೆ ಖಜುರಿ ಗ್ರಾಮದಲ್ಲಿ ನಡೆದಿದೆ.

ಭೋಪಾಲ್ ಜಿಲ್ಲೆಯ ಖಜುರಿ ಗ್ರಾಮದ ಸರಿತಾ ಮಗುವನ್ನು ಕೊಂದ ನಿರ್ದಯಿ ತಾಯಿ. ಕಳೆದ 14 ತಿಂಗಳ ಹಿಂದೆ ಸರಿತಾಗೆ ಡೆಹರಿಯಾ ಕಲಾನ್ ನಿವಾಸಿ ಸಚಿನ್ ಮೆವಾಡಾರೊಂದಿಗೆ ವಿವಾಹವಾಗಿದ್ದು ಕಳೆದ ಒಂದು ತಿಂಗಳ ಹಿಂದೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

ಆದರೆ ತನಗೆ ಗಂಡು ಮಗು ಬೇಕೆಂದು ಹಂಬಲಿದ್ದರಿಂದ ಮಗುವಿನ ಬಗ್ಗೆ ತಾತ್ಸಾರ ಮೂಡಿ ಡ್ರಮ್‍ನಲ್ಲಿ ಮಗುವನ್ನು ಮುಳುಗಿಸಿ ಕೊಲೆ ಮಾಡಿದ್ದಾಳೆ.   ಸರಿತಾಳ ಗಂಡ ಸಚಿನ್ ಹಾಗೂ ಆತನ ತಂದೆ, ತಾಯಿ ಮನೆಯಿಂದ ಹೊರಗೆ ಹೋಗಿದ್ದಾಗ ಮಗುವನ್ನು 50 ಲೀಟರ್‍ನ ಡ್ರಮ್‍ನಲ್ಲಿ ಮುಳುಗಿಸಿ ಸಾಯಿಸಿದ ನಂತರ ಮಗು ನಾಪತ್ತೆಯಾಗಿದೆ ಎಂದು ನಾಟಕವಾಡಿದ್ದಳು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೊದಲು ಮಗುವನ್ನು ಕಾಡು ಪ್ರಾಣಿ ಹೊತ್ತೊಯ್ದಿರಬಹುದು ಎಂದು ಅನುಮಾನಗೊಂಡಿದ್ದರು, ತದ ನಂತರ ಸರಿತಾಳ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ತಾನೇ ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.

 

Facebook Comments