ಬಿಸಿಲಿನ ಬೇಗೆಗೆ ಕಂಗೆಟ್ಟ ವಾನರಗಳು

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಮೇ 21- ತಾಲ್ಲೂಕಿನಾದ್ಯಂತ ತೀವ್ರ ಬರದಿಂದಾಗಿ ಕಾಡು ಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ಪರಿತಪಿಸುತ್ತಿವೆ. ಮನಷ್ಯ ತನಗೆ ಬೇಕಾದ ವಸ್ತುವನ್ನು ಎಷ್ಟೆ ಕಷ್ಟವಾದರೂ ಅಲ್ಪ-ಸ್ವಲ್ಪವನ್ನಾದರೂ ದಕ್ಕಿಸಿಕೊಂಡು ಬದುಕುತ್ತಾನೆ ಆದರೆ ಕಾಡು ಪ್ರಾಣಿಗಳು ತೀವ್ರತರ ಬರದ ಬಿಸಿಲು, ಧಗೆಯಿಂದ ಆಹಾರ ಮತ್ತು ಹನಿ ನೀರಿಗೆ ಪರದಾಡುತ್ತಿವೆ.

ಆಹಾರ, ನೀರು ಅರಸಿ ಬರುವ ಈ ಬಡ ಜೀವಿಗಳಿಗೆ ತಮ್ಮ ಕೈಲಾದಷ್ಟು ಆಹಾರ-ಉಣಿಸಿ ಮಾನವೀಯತೆ ಮೆರೆಯಿರಿ, ತೀವ್ರತರ ಬರದಿಂದ ನೀರಿಲ್ಲದೆ ಬಿಸಿಲಿನ ಬೇಗೆಗೆ ಕಂಗೆಟ್ಟ ಮಂಗಗಳ ಜೀವನ ಹೇಳತೀರದು. ಪಟ್ಟಣಕ್ಕೆ ಆಹಾರ ಮತ್ತು ನೀರು ಹುಡುಕಿಕೊಂಡು ಬರುತ್ತಿರುವ ಮಂಗಗಳ ದೃಶ್ಯ ಮನ ಕಲಕುವಂತಿದೆ.

ಇಂತಹ ಮನ ಕಲಕುವ ಘಟನೆ ಪಟ್ಟಣದಲ್ಲಿ ಹೆಚ್ಚಾಗಿವೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕೆರೆ-ಕಟ್ಟೆಗಳನ್ನು ಮುಚ್ಚಿಕೊಂಡು ಬಳಸಿಕೊಳ್ಳುತ್ತಿರುವುದು ಕಾಡಿನಲ್ಲಿ ವಾಸಿಸುವ ಸಕಲ ಜೀವರಾಶಿಗಳು ತೀವ್ರತರ ಸಂಕಷ್ಟಕ್ಕೀಡಾಗಿವೆ. ಎಷ್ಟೋ ಪ್ರಾಣಿಗಳು ನೀರು,ಆಹಾರವಿಲ್ಲದೆ ಬರದಲ್ಲಿ ಸಾಯುತ್ತಿವೆಕೆಲವೊಂದು ಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ನಾಡಿಗೆ ಬರುತ್ತಿವೆ.

ಇದರಲ್ಲಿ ಮಂಗಗಳ ಕಥೆಯೂ ಒಂದಾಗಿದೆ. ಎಲ್ಲೋ ಅಪರೂಪಕ್ಕೆ ಪಟ್ಟಣ ಮತ್ತು ಗ್ರಾಮಗಳಿಗೆ ಬರುತ್ತಿದ್ದ ಕೋತಿಗಳು ಇಂದು ಬರದಿಂದ ದೇವಾಲಯದ ಪ್ರದೇಶಗಳಲ್ಲಿ , ಆಸ್ಪತ್ರೆಯ ಆವರಣಗಳಲ್ಲಿ ಹೋಟೆಲ್ ಇರುವ ಕಡೆ ಬೀಡು ಬಿಟ್ಟಿವೆ.

ದೇವಾಲಯದಲ್ಲಿ ಭಕ್ತರು ಹಾಕುವ ಪ್ರಸಾದಕ್ಕೆ,ಆಸ್ಪತ್ರೆ ಆವರಣದಲ್ಲಿ ರೋಗಿಗಳು ತರುವ ಆಹಾರ ಪದಾರ್ಥಗಳಿಗೆ ಹೋಟೆಲ್ ಪ್ರದೇಶದಲ್ಲಿ ಮಾಲೀಕರು ಕೊಡುವ ಅಳಿದು ಉಳಿದ ಆಹಾರಕ್ಕಾಗಿ ಕಾದು ಕುಳಿತು ಸಿಕ್ಕ ಆಹಾರವನ್ನು ಕೋತಿಗಳು ತಿನ್ನುತ್ತಿರುವುದು ಕಂಡು ಬರುತ್ತಿವೆ.

ಇದಲ್ಲದೆ ತೆಂಗಿನ ಮರಗಳು ಮಾವಿನ ಮರಗಳು ಸೇರಿದಂತೆ ಹಣ್ಣಿನ ಅಂಗಡಿಗಳ ಬಳಿ ಇವುಗಳು ಸಂತತಿ ಹೆಚ್ಚಾಗಿದೆ. ಮಾನವೀಯತೆಯುಳ್ಳ ಜನರು ಇದನ್ನು ಕಂಡು ಆಹಾರ ಮತ್ತು ನೀರುನ್ನು ನೀಡುತ್ತಾರೆ.

ಕೆಲವರು ಇದಕ್ಕೆ ಹೊಡೆಯಲು ಮುಂದಾಗುತ್ತಾರೆ. ಮನುಷ್ಯನಿಂದ ಹೊಡೆಸಿ ಕೊಂಡಾದಾರೂ ಆಹಾರ ನೀರು ಪೆಡೆಯಲು ಹರಸಾಹಸ ಪಡುತ್ತಿವೆ. ದಯವಿಟ್ಟು ಮಂಗಗಳನ್ನು ಹೊಡೆಯಬೇಡಿ ಎಂದ ಮಂಗಗಳಿಗೆ ಆಹಾರ ನೀರುಣಿಸಿ ಕರುಣೆ ತೋರಿ.

ತಮ್ಮ ಮನೆಯ ಆವರಣದಲ್ಲಿ ಮನೆಯ ಮೇಲ್ಬಾಗ ದಲ್ಲಿ ನೀರಿನ ಕುಡಿಕೆಗಳನ್ನು ಇಡಿ ತಮ್ಮಲ್ಲಿ ಉಳಿದ ಆಹಾರವನ್ನು ಇಡಿ. ಬರದಿಂದ ನರಳುತ್ತಿರುವ ಜೀವ ರಾಶಿಗಳಿಗೆ ಕೊಡಿ.
ನೀರು,ಆಹಾರ ಸೇವಿಸಿ ಬದುಕಿ ಕೊಳ್ಳುತ್ತವೆ. ಇಂತಹ ಒಂದು ಪುಣ್ಯದ ಕೆಲಸದಲ್ಲಿ ಸಮಸ್ತ ಜನತೆ ಭಾಗಿಯಾಗಿ ಎನ್ನುವುದೇ ಈ ಲೇಖನದ ಉದ್ದೇಶವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ