ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಿರೀಕ್ಷಿತ ಮುಂಗಾರು ಅಧಿವೇಶನ ರದ್ದು..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.24-ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಬಹು ನಿರೀಕ್ಷಿತ ಮುಂಗಾರು ಅಧಿವೇಶನ ರದ್ದಾಗುವ ಲಕ್ಷಣಗಳು ಗೋಚರಿಸಿವೆ.

ಜುಲೈ ತಿಂಗಳ ಎರಡನೆ ವಾರದಲ್ಲಿ 10 ದಿನಗಳ ಕಾಲ ಮುಂಗಾರು ಅಧಿವೇಶನ ನಡೆಸುವ ಬಗ್ಗೆ ಗಂಭೀರ ಚಿಂತನೆ ನಡೆಸಿತ್ತು. ಕೊರೊನಾ ಪರಿಸ್ಥಿತಿ ನಿರ್ವಹಣೆ, ರಾಜ್ಯದ ಪ್ರಚಲಿತ ಸಮಸ್ಯೆಗಳ ಬಗ್ಗೆ ಉಭಯ ಸದನಗಳಲ್ಲಿ ಚರ್ಚೆ ನಡೆಸಲು ಉದ್ದೇಶಿಸಲಾಗಿತ್ತು.

ಆದರೆ, ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಕೊರೊನಾ ಮಹಾಮಾರಿ ಬಿಟ್ಟೂಬಿಡದಂತೆ ತನ್ನ ಕಬಂಧಬಾಹುವನ್ನು ವಿಸ್ತರಿಸಿದೆ. ಅದರಲ್ಲೂ ಅಧಿವೇಶನ ನಡೆಯುವ ರಾಜಧಾನಿ ಬೆಂಗಳೂರಿನಲ್ಲೇ ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರುಮುಖವಾಗುತ್ತಿವೆ. ಅಲ್ಲದೆ, ಸಾವಿನ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿರುವುದು ಅವೇಶನದಲ್ಲಿ ಕರಿಮೋಡ ಆವರಿಸುವಂತೆ ಮಾಡಿದೆ.

ಹೀಗಾಗಿ ಈ ಬಾರಿ ಸರ್ಕಾರ ಮುಂಗಾರು ಅವೇಶನವನ್ನು ಮುಂದೂಡಿ ನವೆಂಬರ್, ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ 20 ದಿನಗಳ ಕಾಲ ಅವೇಶನ ನಡೆಸುವ ಚಿಂತನೆ ನಡೆಸಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಕಳೆದ ಬಾರಿ ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಉಂಟಾದ ಪರಿಣಾಮ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅವೇಶನ ರದ್ದುಪಡಿಸಲಾಗಿತ್ತು.

ಇದೀಗ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿರುವ ಕಾರಣ ಮುಂಗಾರು ಅವೇಶನವನ್ನು ಕೆಲ ತಿಂಗಳ ಮಟ್ಟಿಗೆ ಮುಂದೂಡಿ ನವೆಂಬರ್‍ನಲ್ಲೇ ಸತತ ಒಂದು ತಿಂಗಳ ಕಾಲ ಸರ್ಕಾರ ನಡೆಸಲಿದೆ.

ಕರ್ನಾಟಕ ಸಚಿವಾಲಯದ ನಿಯಮಾವಳಿ ಪ್ರಕಾರ ಒಂದು ಅವೇಶನಕ್ಕೂ, ಮತ್ತೊಂದು ಅವೇಶನಕ್ಕೂ ಆರು ತಿಂಗಳ ಅಂತರ ಇರಬಾರದು. ವರ್ಷದಲ್ಲಿ 60 ದಿನ ಸದನ ನಡೆಸಬೇಕು.

ಕಳೆದ ಮಾರ್ಚ್‍ನಲ್ಲಿ ಬಜೆಟ್ ಅವೇಶನ ನಡೆದಿತ್ತು. ಆದರೆ, ಆ ಸಂದರ್ಭದಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಂಡ ಕಾರಣ ಇದ್ದಕ್ಕಿದ್ದಂತೆ ದಿಢೀರನೆ ಅವೇಶನವನ್ನು ಮೊಟಕುಗೊಳಿಸಲಾಯಿತು.

ಸಾಮಾನ್ಯವಾಗಿ ಪ್ರತಿವರ್ಷ ಜನವರಿಯಲ್ಲಿ ಜಂಟಿ ಅವೇಶನ ನಡೆದರೆ ಮಾರ್ಚ್‍ನಲ್ಲಿ ಬಜೆಟ್ ಅವೇಶನ, ಜೂನ್, ಜುಲೈನಲ್ಲಿ ಮುಂಗಾರು ಅವೇಶನ ಹಾಗೂ ನವೆಂಬರ್-ಡಿಸೆಂಬರ್ ಮಧ್ಯಭಾಗದಲ್ಲಿ ಚಳಿಗಾಲದ ಅವೇಶನ ನಡೆಯುವುದು ಸಂಪ್ರದಾಯ.

ಈ ಬಾರಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಇಡೀ ವ್ಯವಸ್ಥೆಯೇ ಬುಡಮೇಲಾಗಿದೆ. 1 ರಿಂದ 9ನೆ ತರಗತಿವರೆಗೆ ಪರೀಕ್ಷೆ ನಡೆಸದೆ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣ ಮಾಡಲಾಯಿತು. ನಾಳೆಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭವಾಗಲಿದೆ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದಿದೆ.

ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‍ಗಳಿಗೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯುವುದೇ ಅನುಮಾನವಾಗಿದೆ. ಇಂತಹ ಸಂದರ್ಭದಲ್ಲಿ ಅವೇಶನ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಜಿಜ್ಞಾಸೆ ಸರ್ಕಾರಕ್ಕೆ ಎದುರಾಗಿದೆ.

ಜತೆಗೆ ಬಹುತೇಕ ಆಡಳಿತಾರೂಢ ಬಿಜೆಪಿ ಸೇರಿದಂತೆ ಕಾಂಗ್ರೆಸ್, ಜೆಡಿಎಸ್‍ನ ಎಲ್ಲ ಶಾಸಕರೂ ಅವೇಶನ ಮುಂದೂಡುವಂತೆ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿದ್ದಾರೆಂದು ಸಚಿವಾಲಯದ ಮೂಲಗಳು ಖಚಿತಪಡಿಸಿವೆ.

ಶಾಸಕರ ಮನವಿಯಂತೆ ಕಾಗೇರಿ ಅವರು ಸದ್ಯದಲ್ಲೇ ಸರ್ವಪಕ್ಷಗಳ ಮುಖಂಡರ ಸಭೆ ಕರೆದು ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಇನ್ನೊಂದು ಮೂಲದ ಪ್ರಕಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜತೆಯೂ ಅವೇಶನ ಮುಂದೂಡುವ ಬಗ್ಗೆ ಚರ್ಚೆ ಮಾಡಲಿದ್ದಾರೆ.

ಉತ್ತರ ಕರ್ನಾಟಕ, ಕರಾವಳಿ ತೀರ ಭಾಗದಿಂದ ಶಾಸಕರು ಅವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಾರೆ. ಜತೆಗೆ ಬೆಂಗಳೂರಿನಲ್ಲೂ ಕೊರೊನಾ ಪ್ರಕರಣಗಳು ಹೆಚ್ಚಾಗಿರುವ ಕಾರಣ ಶಾಸಕರು ಮತ್ತು ಅವರ ಆಪ್ತ ಸಹಾಯಕರು, ಸಂಬಂಕರಿಗೆ ತಗುಲಬಹುದೆಂಬ ಕಾರಣಕ್ಕಾಗಿ ಅವೇಶನ ಮುಂದೂಡುವುದು ಬಹುತೇಕ ಖಚಿತವಾಗಿದೆ.

Facebook Comments

Sri Raghav

Admin