ಚಂದ್ರನನ್ನು ಕುರಿತ ಮಹತ್ವದ ಸಂಗತಿ ಬಹಿರಂಗಗೊಳಿಸಿದ ಇಸ್ರೋ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.5- ಭೂಮಿಯ ಸ್ವಾಭಾವಿಕ ಉಪಗ್ರಹವಾದ ಚಂದ್ರನ ಮೇಲ್ಮೈ ಲಕ್ಷಣಗಳ ಕುರಿತು ಸಂಶೋಧನೆ ಮುಂದುವರೆಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವದ ಸಂಗತಿಯೊಂದನ್ನು ಬಹಿರಂಗಗೊಳಿಸಿದೆ.

ಶಶಾಂಕನನ್ನು ಹೋಲುವ ಚಂದಿರನ ಅಂಗಳ ಮತ್ತು ಮೇಲ್ಮೈನ ಕೆಲವೆಡೆ ತುಕ್ಕು ಹಿಡಿದಿರುವುದನ್ನು ಭಾರತದ ಚಂದ್ರಯಾನ್-1 ಕಾರ್ಯಚರಣೆಯಲ್ಲಿ ತೊಡಗಿರುವ ಆರ್‍ಬಿಟರ್ ಕಕ್ಷೆ ಪ್ರದಕ್ಷಿಣೆ ಸಾಧನವು ಪತ್ತೆ ಮಾಡಿದೆ.

ಚಂದಿರನ ಮೇಲ್ಮೈ ಮೇಲಿನ ಕೆಲ ಹಳ್ಳಗಳಲ್ಲಿ ತುಕ್ಕು ಹಿಡಿದಿರುವುದನ್ನು ಇಸ್ರೋದಾ ಆರ್‍ಬಿಟರ್ ಸಾಧನ ಪತ್ತೆಮಾಡಿದೆ.  ಒಂದು ವರ್ಷಗಳಿಂದ ಆರ್ಬಿಟರ್ ಸಾಧನ ಹಲವು ಬಾರಿ ಚಂದಿರನ ಕಕ್ಷೆಯ ಸುತ್ತ ಪ್ರದಕ್ಷಿಣೆ ಹಾಕಿದ್ದು, ಅದರ ಮೇಲ್ಮೈ ಮತ್ತು ಇತರ ಸಂಗತಿಗಳ ಬಗ್ಗೆ ಹೈ ರೆಸುಲ್ಯೂಷನ್ ಪೋಟೊಗಳನ್ನು ಇಸ್ರೋಗೆ ರವಾನಿಸಿದೆ.

ಚಂದ್ರನ ಮೇಲೆ ಹೆಮಟೈಟ್ ಎಂಬ ತುಕ್ಕು ಅಂಶಗಳು ಪತ್ತೆಯಾಗಿವೆ. ವಾಸ್ತವವಾಗಿ ಚಂದಿರನ ಪ್ರದೇಶ ವಾಯುರಹಿತ. ಆದರೆ ಯಾವುದೇ ವಸ್ತುವಾಗಲಿ ತುಕ್ಕು ಹಿಡಿಯಲು ಆಮ್ಲಜನಕ ಮತ್ತು ತೇವಾಂಶದ ಅಗತ್ಯವಿದೆ.

ಹೀಗಾಗಿ ಚಂದ್ರನಿಗೆ ತುಕ್ಕು ಹಿಡಿಯುತ್ತಿರುವುದರಿಂದ ಶಶಾಂಕನ ಸುತ್ತಮುತ್ತಲ ಪ್ರದೇಶದಲ್ಲಿ ಆಮ್ಲಜನಕ ಮತ್ತು ನೀರಿನ ಅಂಶ ಇರುವ ಸಾಧ್ಯತೆ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಸಲು ಇಸ್ರೋದ ಈ ಮಾಹಿತಿ ನೆರವಾಗಲಿದೆ.

Facebook Comments