12 ರೈಲುಗಳಲ್ಲಿ ವಿವಿಧ ರಾಜ್ಯಗಳಿಗೆ ತೆರಳಿದ 10 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 23- ಬೆಂಗಳೂರಿನಿಂದ ಜಾರ್ಕಂಡ್, ಮಣಿಪುರ್, ಉತ್ತರಪ್ರದೇಶ ವಿವಿಧ ರಾಜ್ಯಗಳಿಗೆ ಸುಮಾರು ಸಾವಿರಾರು ವಲಸೆ ಕಾರ್ಮಿಕರು 12 ರೈಲುಗಳಲ್ಲಿ ಇಂದು ತೆರಳಿದರು.

ಜಾರ್ಕಂಡ್‍ನ ಧನ್‍ಬಾದ್, ಡಾಲ್ಟೋಗಾನಿ, ಬಿಹಾರದ ಕತ್ತಿಹಾರ್, ಬಾಗಲ್‍ಪುರ್, ಒಡಿಶಾ, ಮಣಿಪುರದ ಜರಿಬಾಂಬ್, ಜಾರ್ಕಂಡ್‍ನ ಬೋಕರೊ, ಉತ್ತರ ಪ್ರದೇಶ ಬಸ್ತಿ ಪ್ರದೇಶಕ್ಕೆ ಪ್ರಯಾಣಿಕರನ್ನು ಹೊತ್ತ ರೈಲುಗಳು ಇಂದು ತೆರಳಿದವು.

ಇದಲ್ಲದೆ ಹೊಸೂರಿನಿಂದ ಜಾರ್ಕಂಡ್‍ಗೆ ಹಾಗೂ ಹಾಸನದಿಂದ ಕಟಿಯಾರ್‍ಗೆ ಪ್ರಯಾಣಿಕರನ್ನು ಕಳುಹಿಸಿ ಕೊಡಲಾಯಿತು. ಸುಮಾರು 10 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಶ್ರಮಿಕ್ ರೈಲು ಮೂಲಕ ಇಂದು ವಿವಿಧ ರಾಜ್ಯಗಳಿಗೆ ಕಳುಹಿಸಿ ಕೊಡಲಾಯಿತು.

ಈಗಾಗಲೇ ಶ್ರಮಿಕ್ ರೈಲುಗಳ ಮೂಲಕ ರಾಜಸ್ಥಾನ್, ಪಂಜಾಬ್, ತ್ರಿಪುರ, ಮಣಿಪುರ, ಬಿಹಾರ್, ಅಸ್ಸೊಂ ಮುಂತಾದ ರಾಜ್ಯಗಳಿಗೆ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲಾಗುತ್ತಿದ್ದು, ಕಾರ್ಯಚರಣೆ ಮುಂದುವರೆದಿದೆ. ಸೇವಾ ಸಿಂಧು ಆ್ಯಪ್ ಮೂಲಕ ಆನ್‍ಲೈನ್ ಬುಕ್ ಮಾಡಿ ಕಾರ್ಮಿಕರನ್ನು ಕಳುಹಿಸಿಕೊಡಲಾಗುತ್ತಿದೆ.

Facebook Comments

Sri Raghav

Admin