ಬಿಗ್ ನ್ಯೂಸ್ : 1 ಕೋಟಿ ಮೌಲ್ಯದ 2 ಕ್ವಿಂಟಾಲ್ ಗಾಂಜಾ ವಶ..! ಸಿಸಿಬಿ ಪೊಲೀಸರ ಬಿಗ್ ಆಪರೇಷನ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.27- ರಾಜಧಾನಿಗೆ ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು ಒಂದು ಕೋಟಿ ಮೌಲ್ಯದ 2 ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿರುವ ಸಿಸಿಬಿ ಪೊಲೀಸರು ಆರೋಪಿಯೊಬ್ಬನನ್ನು ಬಂಸಿದ್ದಾರೆ.

ಬಂತ ಆರೋಪಿಯನ್ನು ಮೈಸೂರು ಮೂಲದ ಕೈಸರ್ ಎಂದು ಗುರುತಿಸಲಾಗಿದೆ. ಈತ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ರ್ಪಸಿ ಸೋಲನ್ನಪ್ಪಿದ್ದ. ಹೀಗಾಗಿ ಈತನ ದಂಧೆಗೂ, ರಾಜಕಾರಣಿಗಳಿಗೂ ಲಿಂಕ್ ಇದೆಯೇ ಎಂಬ ಬಗ್ಗೆ ಪೆÇಲೀಸರು ತನಿಖೆ ಆರಂಭಿಸಿದ್ದಾರೆ.

ನೆರೆಯ ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ಆಗಮಿಸುತ್ತಿದ್ದ ರಾಜ್ಯದ ನೋಂದಣಿ ಹೊಂದಿರುವ ಲಾರಿಯಲ್ಲಿ ಭಾರೀ ಪ್ರಮಾಣದ ಮಾದಕ ವಸ್ತು ಗಾಂಜಾ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ಸಿಸಿಬಿ ಪೆÇಲೀಸರು ಈ ದಾಳಿ ನಡೆಸಿದ್ದಾರೆ.

ದೇವನಹಳ್ಳಿ ಸಮೀಪ ಲಾರಿಯನ್ನು ತಡೆದು ಪರಿಶೀಲಿಸಿದಾಗ ಲಾರಿಯಲ್ಲಿ ಒಂದು ಕೋಟಿಗೂ ಹೆಚ್ಚು ಮೌಲ್ಯದ 204 ಕೆಜಿ ಗಾಂಜಾ ಇರುವುದು ಪತ್ತೆಯಾಗಿದೆ.

ತಕ್ಷಣ ಕೈಸರ್‍ನನ್ನು ಬಂಸಿರುವ ಸಿಸಿಬಿ ಇನ್ಸ್‍ಪೆಕ್ಟರ್ ಬೋಳೆತ್ತಿನ್ ತನಿಖೆ ಆರಂಭಿಸಿದ್ದಾರೆ. ಭಾರೀ ಪ್ರಮಾಣದ ಗಾಂಜಾವನ್ನು ರಾಜಧಾನಿಯ ವಿವಿಧ ಗಣ್ಯವ್ಯಕ್ತಿಗಳಿಗೆ ಸರಬರಾಜು ಮಾಡಲು ಸಾಗಿಸಲಾಗುತ್ತಿತ್ತು ಎಂಬ ಅನುಮಾನ ವ್ಯಕ್ತವಾಗಿದೆ.

Facebook Comments

Sri Raghav

Admin