ಕರುವನ್ನು ತಿನ್ನಲು ಬಂದು ನಾಯಿಗಳಿಗೆ ಹೆದರಿ ಮರವೇರಿ ಕುಳಿತ ಚಿರತೆ..!

ಈ ಸುದ್ದಿಯನ್ನು ಶೇರ್ ಮಾಡಿ

Leopard--01
ಹುಣಸೂರು, ಜೂ.2- ಚಿರತೆ ಕಂಡರೆ ಮನುಷ್ಯರಿರಲಿ ಇತರೆ ಪ್ರಾಣಿಗಳೂ ಹೆದರುತ್ತವೆ. ಆದರೆ, ಇಲ್ಲೊಂದು ಚಿರತೆ ನಾಯಿಗಳಿಗೆ ಬೆದರಿ ಮರವೇರಿದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ಗಾವಡಗೆರೆ ಹೋಬಳಿ ಕಳ್ಳಿಕೊಪ್ಪಲಿನಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಸಂಜೆ ನಾಗೇಗೌಡರ ಕುಟುಂಬದವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರು ಕರುವೊಂದನ್ನು ಬೇಲದ ಮರಕ್ಕೆ ಕಟ್ಟಿಹಾಕಿ ನಾಯಿಗಳನ್ನು ಕಾವಲಿಗೆ ಬಿಟ್ಟಿದ್ದರು.

ಕರುವಿನ ಕೂಗು ಕೇಳಿದ ಸಮೀಪದಲ್ಲಿದ್ದ ಚಿರತೆ ಅದನ್ನು ಎಳೆದೊಯ್ಯಲು ಜಮೀನಿಗೆ ಬಂದಿದೆ. ಇದನ್ನು ಕಂಡ ಕಾವಲಿಗದ್ದ ನಾಯಿಗಳು ಚಿರತೆಯತ್ತ ಬೊಗಳುತ್ತಾ ದಾಳಿಗೆ ಮುಂದಾಗಿವೆ. ನಾಯಿ ಹಿಂಡಿಗೆ ಬೆದರಿದ ಚಿರತೆ ಬೇಲದ ಮರವೇರಿ ಕೂತಿದೆ. ತಕ್ಷಣ ನಾಗೇಗೌಡರ ಕುಟುಂಬದವರು ಹಾಗೂ ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಡಿಸಿಎಫ್ ವಿಜಯ್‍ಕುಮಾರ್, ಆರವಳಿಕೆ ತಜ್ಞ ಡಾ.ಮುಜೀಬ್, ಎಸಿಎಫ್‍ಗಳಾದ ಸೋಮಪ್ಪ, ಪ್ರಸನ್ನಕುಮಾರ್, ಆರ್‍ಎಫ್‍ಒ ಶಾಂತಕುಮಾರ ಸ್ವಾಮಿ, ಸಿಬ್ಬಂದಿಗಳಾದ ರಿಜ್ವಾನ್, ಹರಿ ಹಾಗೂ ಗ್ರಾಮಾಂತರ ಪೊಲೀಸರು ದಾವಿಸಿದ್ದಾರೆ. ನಂತರ ಚಿರತೆಗೆ ಅರವಳಿಗೆ ಚುಚ್ಚುಮದ್ದು ನೀಡಿದರೂ ಪ್ರಯೋಜನವಾಗಿಲ್ಲ. ಆದರೆ, ಗ್ರಾಮಸ್ಥರ ಕೂಗಾಟದಿಂದ ಮರದಿಂದ ಇಳಿದು ಓಡಲು ಪ್ರಯತ್ನಿಸಿದಾಗ. ಮತ್ತೆ ಮತ್ತೊಂದು ಅರವಳಿಕೆ ಚುಚ್ಚುಮದ್ದು ಕೊಟ್ಟು ಬಲೆ ಬೀಸಿ ಹಿಡಿಯಲಾಗಿದೆ. ಚಿರತೆಯನ್ನು ನಂತರ ನಾಗರಹೊಳೆ ಅಭಯಾರಣ್ಯಕ್ಕೆ ಕೊಂಡೊಯ್ಯಲಾಯಿತು.

Facebook Comments

Sri Raghav

Admin