5 ಹೆಣ್ಣು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ತಾಯಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ರಾಯ್‍ಪುರ್,ಜೂ.10-ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಹಿಳೆಯೊಬ್ಬರೂ ತನ್ನ ಐದು ಹೆಣ್ಣು ಮಕ್ಕಳೊಂದಿಗೆ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಛತ್ತಿಸ್‍ಗಢದಲ್ಲಿ ನಡೆದಿದೆ.

ರಾಯ್‍ಪುರದ ಬೇಮ್ಚಾ ಗ್ರಾಮದ ಉಮಾ ಸಾಹು, ಆಕೆಯ ಮಕ್ಕಳಾದ ಅನುಪಮ, ಯಶೋಧ, ಭೂಮಿಕಾ, ಕುಮ್‍ಕುಮ್ ಹಾಗೂ ತುಳಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳು.

ಪತಿಯೊಂದಿಗೆ ಜಗಳವಾಡಿಕೊಂಡಿದ್ದ ಉಮಾ ಸಾಹು ತನ್ನ ಐದು ಹೆಣ್ಣು ಮಕ್ಕಳೊಂದಿಗೆ ನಿನ್ನೆ ರಾತ್ರಿ ಮಹಸಾಮುಂಡ್-ಬೆಲ್ಸೊಂಡಾ ರೈಲ್ವೇ ಕ್ರಾಸಿಂಗ್ ಸಮೀಪ ಬಂದು ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್‍ಪಿ ಮೇಘಾ ತೆಂಬುರ್ಕರ್ ತಿಳಿಸಿದ್ದಾರೆ.

Facebook Comments

Sri Raghav

Admin