ನೀರಿನ ತೊಟ್ಟಿಗೆ ಬಿದ್ದು ತಾಯಿ-ಮಗು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಸೆ.5- ನೀರಿನ ತೊಟ್ಟಿಗೆ ಒಂದೂವರೆ ವರ್ಷದ ಮಗು ತಳ್ಳಿ ತಾಯಿಯೂ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮತ್ತಿಹಳ್ಳಿ ನಿವಾಸಿ ರಮ್ಯಾ (32) ಮತ್ತು ಒಂದೂವರೆ ವರ್ಷದ ಆರಿಕ ಮೃತಪಟ್ಟವರು.

ಚಿಕ್ಕಮಗಳೂರಿನ ಇಂದವರದ ತನ್ನ ಚಿಕ್ಕಪ್ಪನ ಮನೆಯಲ್ಲಿ ಕಳೆದ ಆರು ತಿಂಗಳಿನಿಂದ ಮಗುವಿನೊಂದಿಗೆ ರಮ್ಯಾ ನೆಲೆಸಿದ್ದರು. ಈ ನಡುವೆ ಖಿನ್ನತೆಗೆ ಒಳಗಾಗಿದ್ದ ರಮ್ಯಾಳಿಗೆ ಚಿಕ್ಕಮಗಳೂರಿನಲ್ಲಿ ಚಿಕಿತ್ಸೆ ಕೊಡಿಸಿದ್ದರು.ರಾತ್ರಿ ಮಗುವನ್ನು ನೀರಿನ ತೊಟ್ಟಿಗೆ ಎಸೆದು ತಾಯಿ ರಮ್ಯಾ ಸಹ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುದ್ದಿ ತಿಳಿದು ಗ್ರಾಮಾಂತರ ಠಾಣೆ ಪಿಎಸ್‍ಐ ಗವಿರಾಜ್ ಸ್ಥಳಕ್ಕೆ ತೆರಳಿ ತೊಟ್ಟಿಯಿಂದ ಮಗು ಮತ್ತು ತಾಯಿಯ ಮೃತ ದೇಹಗಳನ್ನು ಮೇಲೆತ್ತಿ ಪರಿಶೀಲನೆ ನಡೆಸಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments