ತಾಯಿಯ ಸಾವಿನ ನಡುವೆಯೂ ಪರೀಕ್ಷೆ ಎಸ್‍ಎಸ್‍ಎಲ್‍ಸಿ ಬರೆದ ವಿದ್ಯಾರ್ಥಿನಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜು.3-ತಾಯಿಯ ಸಾವಿನ ನಡುವೆಯೂ ವಿದ್ಯಾರ್ಥಿನಿಯೊಬ್ಬರು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿರುವ ಮನಕಲಕುವ ಘಟನೆ ನಡೆದಿದೆ. ಸಾಂ ಸ್ಕøತಿಕ ನಗರಿ ಮೈಸೂರಿನ ಬಿರಿಹುಂಡಿ ಗ್ರಾಮದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ದೀಪು ಅವರ ತಾಯಿ ಲಕ್ಷ್ಮಮ್ಮ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ,  ಈ ದುಃಖದಲ್ಲೇ ದೀಪು ಇಂದು ಮೈಸೂರಿನ ರೂಪಾನಗರದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ.

ತಾಯಿ ಲಕ್ಷ್ಮಮ್ಮ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಗಳು ದೀಪು ಮನನೊಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ನಿರಾಕರಿಸಿದಳು.  ವಿದ್ಯಾರ್ಥಿನಿಯ ಭವಿಷ್ಯ ಹಾಳಾಗದಿರಲಿ ಎಂಬ ದೃಷ್ಟಿಯಿಂದ ಕುಟುಂಬಸ್ಥರು ವಿದ್ಯಾರ್ಥಿನಿಯರಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಸ್ಥೈರ್ಯ ತುಂಬಿದ್ದಾರೆ.

ನೀನು ಪರೀಕ್ಷೆ ಬರೆದು ಹಿಂತಿರುಗಿ ಬರುವವರೆಗೂ ನಿನ್ನ ತಾಯಿಯ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು ಕೊನೆಗೆ ದುಃಖದ ನಡುವೆಯೇ ದೀಪು ಹಿಂದಿ ಪರೀಕ್ಷೆಯನ್ನು ಬರೆದಿದ್ದಾಳೆ.

ಪರೀಕ್ಷೆ ಮುಗಿದ ಬಳಿಕ ತಾಯಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾಳೆ.  ಇದೇ ರೀತಿ ಗದಗದಲ್ಲಿ ತಂದೆಯನ್ನು ಕಳೆದುಕೊಂಡ ವಿದ್ಯಾರ್ಥಿನಿ ಅನುಷಾ ಪರೀಕ್ಷೆ ಬರೆದಿರುವುದು ಕರುಣಾಜನಕವಾಗಿದೆ.

Facebook Comments