ತಾಯಿ ಕೊಲೆ ಪ್ರಕರಣ : ಮಗಳ ತೀವ್ರ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.6- ಹೆತ್ತ ತಾಯಿಯನ್ನೇ ಕೊಂದು ತಲೆಮರೆಸಿ ಕೊಂಡಿದ್ದ ಆರೋಪಿ ಮಗಳು ಅಮೃತಾ ಳನ್ನು ಅಂಡಮಾನ್-ನಿಕೋಬಾರ್‍ನಿಂದ ಕೆಆರ್ ಪುರಂ ಠಾಣೆ ಪೊಲೀಸರು ನಗರಕ್ಕೆ ಕರೆತಂದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಅಂಡಮಾನ್‍ಗೆ ತೆರಳಿದ್ದ ಪೊಲೀಸ್ ತಂಡ ಇಂದು ಬೆಳಗ್ಗೆ ಅಮೃತಾ ಹಾಗೂ ಈಕೆಯ ಸ್ನೇಹಿತ ಶ್ರೀಧರ್‍ರಾವ್‍ನನ್ನು ಕೆಆರ್ ಪುರಂ ಠಾಣೆಗೆ ಕರೆದುಕೊಂಡು ಬಂದಿದ್ದು, ಇಬ್ಬರನ್ನೂ ತೀವ್ರ ವಿಚಾರಣೆಗೊಳಪಡಿಸಿ ಘಟನೆಗೆ ನಿಖರ ಕಾರಣದ ಬಗ್ಗೆ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ.

ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದ ಅಮೃತಾ ಕೆಲ ತಿಂಗಳುಗಳಿಂದ ನೌಕರಿಗೆ ಹೋಗದೆ ಮನೆಯಲ್ಲಿಯೇ ಲ್ಯಾಪ್‍ಟಾಪ್‍ನಲ್ಲಿ ಕೆಲಸ ಮಾಡುತ್ತಿದ್ದರೇ ಎಂಬ ಬಗ್ಗೆಯೂ ಹಾಗೂ ಪ್ರತಿ ತಿಂಗಳು ಮನೆಗೆ ಹಣ ಕೊಡುತ್ತಿದ್ದರೆಂಬ ಮಾಹಿತಿ ಇದೆ.

ಈ ಹಣ ಕಂಪೆನಿಯವರು ಕೊಡುತ್ತಿದ್ದರೋ ಅಥವಾ ಸಾಲ ಮಾಡಿ ಮನೆಗೆ ಹಣ ಕೊಡುತ್ತಿದ್ದರೋ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಒಟ್ಟಾರೆ ಇವರಿಬ್ಬರಿಂದ ಹೇಳಿಕೆಗಳನ್ನು ಪಡೆಯುತ್ತಿದ್ದು, ವಿಚಾರಣೆ ಪೂರ್ಣಗೊಂಡ ಬಳಿಕ ಘಟನೆಗೆ ನಿಖರ ಕಾರಣ ಗೊತ್ತಾಗಲಿದೆ.

Facebook Comments