ಕರೋನಾ ಗುಣಮುಖರಾಗಿ ಬಂದ ತಾಯಿಯನ್ನು ಮನೆಗೆ ಸೆರಿಸದ ಮಗ, ನೊಂದು ತಾಯಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾವೇರಿ.ಮೇ.13 ಒಂಭತ್ತು ತಿಂಗಳು ಹೆತ್ತು.ಹೊತ್ತು ಸಾಕಿ ಬೆಳೆಸಿ ದೊಡ್ಡವನಾಗಿ ಮಾಡಿದ ತಾಯಿಗೆ ಆತ್ಮಹತ್ಯೆ ಶಿಕ್ಷೆ.ಕರೋನಾ ಸೊಂಕು ಗೆದ್ದು ಮನೆಗೆ ಬಂದ ತಾಯಿಯನ್ನು ಒಳಗೆ ಸೆರಿಸದ ಮಗನ ವರ್ತನೆಯಿಂದ ಮನನೊಂದು ವೃದ್ದೆ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನ ಜಿಲ್ಲೆಯ ದೇವಿಹೊಸುರು ಗ್ರಾಮದಲ್ಲಿ ನಡೆದಿದೆ. ಅಡಿವೆಕ್ಕ ಕಬ್ಬೂರು(80) ಆತ್ಮಹತ್ಯೆ ಮಾಡಿಕೊಂಡ ತಾಯಿ.

ವೃದ್ದೆಗೆ ಸೊಂಕು ತಗುಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣ ಮುಖರಾದ ಹಿನ್ನಲೆಯಲ್ಲಿ ತಾಯಿಯನ್ನು ಮಗಳು ಆಟೋ ಹತ್ತಿಸಿ ದೇವಿಹೂಸೂರಿನಲ್ಲಿರುವ ನಿವಾಸಕ್ಕೆ ಕಳುಹಿಸಿದ್ದಾರೆ. ಆದರೆ ಮನೆಯಲ್ಲಿದ್ದ ಮಗ ಮತ್ತು ಸೋಸೆ ತಾಯಿಯನ್ನು ಮನೆಯ ಒಳಗೆ ಕರೆದು ಕೊಳ್ಳದೆ ನಿನಗೆ ಕರೋನಾ ಇದೆ ಮನೆ ಒಳಗೆ ಬರಬೆಡ ಆಚೆ ನಿಲ್ಲು ಎಂದು ನಿಂದಿಸಿದ್ದಾರೆ.ಇದರಿಂದ ಮನನೊಂದ ತಾಯಿ ಮನೆಯಿಂದ ಹೊರಗೆ ಬಂದು ಗ್ರಾಮದಹೊರವಲಯದ ಹೆಗ್ಗೆರೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಗ್ರಾಮದಲ್ಲಿ ಎಲ್ಲೂ ತಾಯಿ ಕಾಣದಿದ್ದಾಗ ಊರೆಲ್ಲಾ ಉಡುಕಿದರೂ ಪತ್ತೆಯಾಗಿರಲಿಲ್ಲ ವೃದ್ದೆ ನಾಪತ್ತೆಯಾಗಿದ್ದಾರೆಂದು ಪೊಲೀಸ್ ಠಾಣೆ ಗೆ ದೂರು ಕೂಡ ಮಗನೆ ನಿಡಿರುತ್ತಾನೆ. ಕೆರೆಯಲ್ಲಿ ವೃದ್ದೆಯ ಶವ ತೆಲುತ್ತಿದ್ದು ಮೀನುಗಾರರ ಕಣ್ಣಿಗೆ ಬಿದ್ದಿದ್ದು ಕೂಡಲೆ ಗ್ರಾಮಸ್ಥರು ಹಾಗೂ ಪೊಲೀಸರಿಗೆ ಸುದ್ದಿತಿಳಿಸಿದ್ದು ಸ್ಥಳಕ್ಕಾಗಮಿಸಿದ ಪೊಲಿಸರು ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ತನ್ನ ತಾಯಿಯ ಆತ್ಮಹತ್ಯೆ ಗೆ ನನ್ನ ಅಣ್ಣ ಹಾಗೂ ಅತ್ತಿಗೆಯೇಕಾರಣ ಎಂದು ಮೃತ ವೃದ್ದೆಯ ಪುತ್ರಿ ಆರೋಪಿಸಿದ್ದಾರೆ.

Facebook Comments