ಈ ವಾರ ರಾಜ್ಯಾದ್ಯಂತ ‘ಮೌನಂ’ ಚಿತ್ರ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾಂಡಲ್‍ವುಡ್‍ನಲ್ಲಿ ಹಲವಾರು ಬಗೆಯ ಚಿತ್ರಗಳು ಬರುತ್ತಿವೆ. ಕೆಲವೇ ಚಿತ್ರಗಳು ಗಮನ ಸೆಳೆಯುವಂತಹ ಕಥಾಅಂಶವನ್ನು ಹೊತ್ತುಕೊಂಡು ಬೆಳ್ಳಿ ಪರದೆ ಮೇಲೆ ತನ್ನ ಸಾಮಥ್ರ್ಯ ತೋರಿಸಲು ಮುಂದಾಗುತ್ತವೆ. ಆ ಸಾಲಿಗೆ ಯುವ ಪ್ರತಿಭೆಗಳ ಮೌನಂ ಚಿತ್ರ ಕೂಡ ಸೇರಿಕೊಂಡಿದೆ ಎನ್ನಬಹುದು. ಈ ವಾರ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮೌನಂ ತನ್ನ ಪ್ರದರ್ಶನ ನೀಡಲಿದೆ.

ಶೀರ್ಷಿಕೆಯು ಸಂಸ್ಕøತ ಭಾಷೆ ಆಗಿರುವುದರಿಂದ ಎಲ್ಲ ಭಾಷೆಗಳಿಗೂ ಹೊಂದಿಕೊಳ್ಳುತ್ತದೆ. ನಿಶ್ಯಬ್ದಕ್ಕೂ ಶಬ್ದವಿದೆ ಎಂಬ ಅಡಿಬರಹ ಹಾಗೂ ಭಾರತೀಯ ಚಿತ್ರರಂಗದ ವಿನೂತನ ಸಿನಿಮಾವೆಂದು ಹೇಳಿಕೊಂಡಿದೆ. ಚಿತ್ರದ ಕುರಿತು ಹೇಳುವುದಾದರೆ ನಾವುಗಳು ಬೇರೆಯವರನ್ನು ಶತ್ರುಗಳು ಅಂತ ನೋಡುತ್ತೇವೆ. ಆದರೆ ನಮ್ಮೊಳಗೆ ಇದರ ಗುಣ ಇರುವುದು ತಿಳಿದಿರುವುದಿಲ್ಲ. ಒಳ್ಳೇದು ಮಾಡಿದರೂ ಕಷ್ಟದಲ್ಲಿ ಸಿಲುಕುತ್ತೇವೆ.

ಬುದ್ಧಿ, ಜೀವನ ಬೇರೆ ಬೇರೆಯಾಗಿರುತ್ತದೆ. ಅತಿ ಬುದ್ದಿವಂತಿಕೆ ತೋರಿಸಿದರೆ ಏನಾದರೂ ಅವಘಡಗಳು ಸಂಭವಿಸುತ್ತದೆ. ಎಲ್ಲರೂ ತಮ್ಮ ಮಕ್ಕಳು ಒಳ್ಳೆಯ ದಾರಿಗೆ ಹೋಗಬೇಕೆಂದು ಹಿತವಚನ ಕೊಡುತ್ತಾರೆ. ಇದರಲ್ಲಿ ತಂದೆಯಾದವನು ಮಗನಿಗೆ ಮೊದಲು ಕೆಟ್ಟದಾರಿಗೆ ಕರೆದುಕೊಂಡು ಹೋಗಿ, ಇಲ್ಲಿಗೆ ಹೋದರೆ ಈ ರೀತಿ ಆಗುತ್ತದೆ.

ಅದಕ್ಕಾಗಿ ಸನ್ಮಾರ್ಗದಲ್ಲಿ ಹೋಗಲು ಅರಿವು ಮೂಡಿಸುತ್ತಾರೆ. ಇಂತಹ ಸನ್ನಿವೇಶಗಳು ಬರಲಿದ್ದು, ಪ್ರತಿಯೊಂದು ದೃಶ್ಯಕ್ಕೂ ಅರ್ಥಪೂರ್ಣ ಸಂದೇಶ ಇರುವುದು ವಿಶೇಷ. ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ಬಾಲಾಜಿಶರ್ಮ ಹಿರಿತೆರೆಗೆ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ. ಹಾಸ್ಯ, ಭಾವನೆಗಳು, ರೊಮಾನ್ಸ್ ಹೀಗೆ ನಾಲ್ಕು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕಾಲೇಜಿನಲ್ಲಿ ಬಿಂದಾಸ್ ಆಗಿರುವ ನಾಯಕಿಯ ಬದುಕಿನಲ್ಲಿ ಘಟನೆಯೊಂದು ನಡೆದಾಗ ಅದು ಎಲ್ಲಿಗೋ ತೆಗೆದುಕೊಂಡು ಹೋಗುತ್ತದೆ. ಪ್ರೀತಿಗೆ ಸಂಕೀರ್ಣ ಅರ್ಥಗಳು ಇರುತ್ತದೆ ಎಂದು ಹೇಳುವ ನಾಯಕಿ ಮಯೂರಿ ಎರಡು ಶೇಡ್‍ಗಳಲ್ಲಿ ನಟಿಸಿದ್ದಾರೆ.

ಈಕೆಯನ್ನು ಕೆಟ್ಟ ದಾರಿಗೆ ಕರೆದುಕೊಂಡು ಹೋಗುವ ಗೆಳತಿಯಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ. ಬಹು ಮುಖ್ಯವಾಗಿ ವೃತ್ತಿ ಜೀವನದಲ್ಲಿ 800ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವಿನಾಶ್ ಇದೆಲ್ಲಕ್ಕಿಂತ ಭಿನ್ನವಾಗಿ ಕುಂಚಕಲಾವಿದರಾಗಿ, ಮಗನ ಮುದ್ದಿನ ತಂದೆಯಾಗಿ, ಗನ್ ಹಿಡಿಯುವ ಪಾತ್ರಧಾರಿಯಾಗಿ ಹಲವಾರು ಮಜಲುಗಳನ್ನು ತೆರೆ ಮೇಲೆ ತೋರಿಸುವ ನಿಟ್ಟಿನಲ್ಲಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಗುಣವಂತಮಂಜು, ಕನ್ನಡಿಗ ಬಲರಾಂ, ರಿತೇಶ್,ಹನುಮಂತೇಗೌಡ, ಜಯಲಕ್ಷ್ಮಿ ಮುಂತಾದವರ ನಟನೆ ಇದೆ. ದೇವರಿಗೆ ಪಾಠ ಎನ್ನುವ ಕಿರುಚಿತ್ರ ನಿರ್ದೇಶನ ಮಾಡಿರುವ ಬೀದರ್ ಮೂಲದ ರಾಜ್‍ಪಂಡಿತ್ ರಚನೆ, ಚಿತ್ರಕತೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿರುವುದು ಹೊಸ ಅನುಭವ.

ಆಕಾಶ್.ಎಸ್ ಸಾಹಿತ್ಯದ ಮೂರು ಹಾಡುಗಳಿಗೆ ಆರವ್‍ರುಷಿಕ್ ರಾಗ ಒದಗಿಸಿದ್ದಾರೆ. ಛಾಯಾಗ್ರಹಣ ಶಂಕರ್, ಸಂಕಲನ ಗುರುಮೂರ್ತಿ ಹೆಗಡೆ-ಹೆಚ್. ಆರ್.ಅನುರಂಜನ್, ಕಲೆ ಇಸ್ಮೈಲ್, ಸಾಹಸ ಅಲ್ಟಿಮೇಟ್‍ಶಿವು-ಕೌರವ ವೆಂಕಟೇಶ್, ನಿರ್ವಹಿಸಿದ್ದಾರೆ. ಬಾಲ್ಯದಿಂದಲೂ ನಟನಾಗಬೇಕೆಂದು ಬಯಸಿದ್ದ ಆಂಧ್ರದ ಕನ್ನಡಿಗ ಶ್ರೀಹರಿ ಪೂರ್ಣ ಪ್ರಮಾಣದಲ್ಲಿ ನಿರ್ಮಾಪಕರಾಗಿ ಈ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ.

Facebook Comments

Sri Raghav

Admin